ಮೂಡುಬಿದಿರೆ: ವ್ಯಕ್ತಿ ನಾಪತ್ತೆ
ಮಂಗಳೂರು, ಜೂ.26: ತಾಲೂಕಿನ ಕಂದಾವರ ಪದವಿನ ಅಭೀಷ್ಠ ಮನೆಯಲ್ಲಿದ್ದ ವೃದ್ಧರೋರ್ವರು ರವಿವಾರ ನಾಪತ್ತೆಯಾಗಿದ್ದಾರೆ.
ಪಿ.ಹರಿಭಟ್ (73) ನಾಪತ್ತೆಯಾದವರು.
ಮೂಡುಬಿದಿರೆಯಿಂದ ತಾಲೂಕಿನ ಕಂದಾವರ ಪದವಿನ ಅಭೀಷ್ಠದಲ್ಲಿದ್ದ ತನ್ನ ಮಗಳಾದ ವಿದ್ಯಾ ಗಜಾನನ ಭಟ್ ಅವರ ಮನೆಗೆ ನಾಪತ್ತೆಯಾದ ಪಿ.ಹರಿಭಟ್ ಶನಿವಾರ ಆಗಮಿಸಿದ್ದರು. ಮರುದಿನ ಬೆಳಗ್ಗೆ ವಿದ್ಯಾ ತನ್ನ ಮಗಳನ್ನು ಶಾಲೆಗೆ ಬಿಟ್ಟು ಬಂದ ಬಳಿಕ ನೋಡಿದಾಗ ತಂದೆ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.
ಚಹರೆ: ನಾಪತ್ತೆಯಾದ ಹರಿಭಟ್ ಸ್ವಲ್ಪ ಮಾನಸಿಕ ಅಸ್ವಸ್ಥರಾಗಿದ್ದು, ಹೋಗುವಾಗ ನೀಲಿ ಬಣ್ಣದ ಬರ್ಮುಡಾ, ಚೆಕ್ಸ್ ಟಿ-ಶರ್ಟ್ ಧರಿಸಿದ್ದರು. 5 ಅಡಿ ಎತ್ತರವಿದ್ದು, ಗುಂಡು ಮುಖ, ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕೂದಲು ಸಣ್ಣದಾಗಿ ಕತ್ತರಿಸಿದ್ದರು. ಕನ್ನಡ, ತುಳು ಭಾಷೆಗಳನ್ನು ಮಾತನಾಡಬಲ್ಲವರು.
ಈ ಕುರಿತು ಮೂಡುಬಿದಿರೆಯ ಪಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಪೊಲೀಸರಿಗೆ ತಿಳಿಸಲು ಕೋರಲಾಗಿದೆ.
Next Story





