ಕೋಳಿ ಅಂಕ ಜೂಜಾಟ: 80 ಮಂದಿ ಬಂಧನ
49 ಬೈಕ್ ಸೇರಿ 79 ಲಕ್ಷ ರೂ. ಮೌಲ್ಯದ ಸೊತ್ತು ವಶ

ಮಂಗಳೂರು, ಜೂ.26: ಮೂಡುಬಿದಿರೆ ವ್ಯಾಪ್ತಿಯ ಹೊಸಬೆಟ್ಟು ಗ್ರಾಮದ ಬೊಗ್ರುಗುಡ್ಡೆಯ ತೆರೆದ ಜಾಗದಲ್ಲಿ ಕೋಳಿಅಂಕ ಜೂಜಾಟ ನಡೆಸುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ 80 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳದಲ್ಲಿ 33 ಕೋಳಿಹುಂಜ, ಎರಡು ಕೋಳಿಬಾಲ್‌ಗಳು, 8,575 ರೂ. ನಗದು, 49 ಬೈಕ್, ಎಂಟು ಆಟೊರಿಕ್ಷಾ, ಏಳು ಕಾರುಗಳು, ಕೋಳಿಅಂಕ ನಡೆಯುವಲ್ಲಿ ಹಾಕಿದ್ದ ಟೆಂಟ್, 25 ಪ್ಲಾಸ್ಟಿಕ್ ಚೇರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 79,33,585 ರೂ. ಎಂದು ಅಂದಾಜಿಸಲಾಗಿದೆ.
ಹೊಸಬೆಟ್ಟು ಗ್ರಾಮದ ಬೊಗ್ರುಗುಡ್ಡೆಯ ತೆರೆದ ಜಾಗದಲ್ಲಿ ಕೋಳಿಅಂಕ ಜೂಜಾಟ ನಡೆಸುತ್ತಿದೆ ಎಂಬ ಮಾಹಿತಿ ಮೇರೆಗೆ ಈ ದಾಳಿಯನ್ನು ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ನಿರ್ದೇಶನದಂತೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪಪೊಲೀಸ್ ಆಯುಕ್ತ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತೆ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಪಿಎಸ್ಸೈ ದೇಜಪ್ಪ, ಎಎಸ್ಸೈಗಳಾದ ಕೃಷ್ಣ, ವಿಜಯಕುಮಾರ್, ಎಚ್‌ಸಿಗಳಾದ ರಾಜೇಶ್, ಸುಧಾಕರ್ ರಾವ್, ಉಮೇಶ್‌ಗೌಡ, ಪಿಸಿಗಳಾದ ಸುರೇಶ್, ಸುಜನ್, ಅಖಿಲ್, ಪ್ರದೀಪ್, ಶಿವರಾಜ್, ಗೋವೊಂದರಾಜ್, ಬ್ರಹ್ಮಾನಮದ, ಪರಶುರಾಮ್, ಯಶವಂತ, ತಿರುಮಲೇಶ್, ಸುರೇಶ್, ಚಂದ್‌ರಹಾಸ್, ಕೃಷ್ಣಪ್ಪ, ಜೀಪು ಚಾಲಕ ಪಾಲ್ಗೊಂಡಿದ್ದರು.
ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ.







