ಜೂ.ಶೂಟಿಂಗ್ ವಿಶ್ವಕಪ್: ವಿಶ್ವದಾಖಲೆಯೊಂದಿಗೆ ಸ್ವರ್ಣ ಗೆದ್ದ ಸೌರಭ್

ಬರ್ಲಿನ್, ಜೂ.26: ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತದ 16ರ ಹರೆಯದ ಶೂಟರ್ ಸೌರಭ್ ಚೌಧರಿ ಮಂಗಳವಾರ ನೂತನ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ.
ಸೌರಭ್ 10 ಮೀ. ಏರ್ ಪಿಸ್ತೂಲ್ ಇವೆಂಟ್‌ನಲ್ಲಿ ಒಟ್ಟು 243.7 ಅಂಕ ಗಳಿಸಿ ಈ ಸಾಧನೆ ಮಾಡಿದ್ದಾರೆ.
ಸೌರಭ್ ಸಾಧನೆಯೊಂದಿಗೆ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ 8ನೇ ಚಿನ್ನದ ಪದಕ ಜಯಿಸಿದೆ.
8 ಶೂಟರ್‌ಗಳಿದ್ದ ಫೈನಲ್‌ನಲ್ಲಿ ಸೌರಭ್ 243.7 ಅಂಕ ಗಳಿಸಿದರೆ, ಕೊರಿಯಾದ ಶೂಟರ್ ಲಿಮ್ ಹೊಜಿನ್(239.6) ಬೆಳ್ಳಿ ಜಯಿಸಿದರು. ಚೀನಾದ ವಾಂಗ್ ಝೆಹಾವೊ(218.7)ಕಂಚು ಜಯಿಸಿದ್ದಾರೆ.
ಸಿಡ್ನಿಯಲ್ಲಿ ನಡೆದ ಮೊದಲ ಐಎಸ್‌ಎಸ್‌ಎಫ್ ಜೂ.ವಿಶ್ವಕಪ್‌ನಲ್ಲಿ ಚೀನಾದ ಶೂಟರ್ ವಾಂಗ್ ಝೆಹಾವೊ 242.5 ಅಂಕ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ವಾಂಗ್ ದಾಖಲೆಯನ್ನು ಮುರಿದ ಸೌರಭ್ ನೂತನ ವಿಶ್ವ ದಾಖಲೆ ನಿರ್ಮಿಸಿದರು.
Next Story





