ಬೆಳೆ ವಿಮೆ: ನೊಂದಾಯಿಸಲು ಸೂಚನೆ
ಉಡುಪಿ, ಜೂ.26: ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರು ನೊಂದಾಯಿಸಿಕೊಳ್ಳಲು ಜೂ.30 ಕೊನೆಯ ದಿನವಾಗಿದ್ದು, ಕೂಡಲೇ ರಾಷ್ಟ್ರೀಕೃತ /ಸಹಕಾರಿ/ ವಾಣಿಜ್ಯ ಬ್ಯಾಂಕುಗಳನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಈ ಯೋಜನೆಯಡಿ 2018ರ ಜುಲೈ 1ರಿಂದ 2019ರ ಜೂನ್ 15ರವರೆಗೆ ಅಡಿಕೆ ಬೆಳೆಗೂ, ಜು.1ರಿಂದ ಜೂ.30ರವರೆಗೆ ಕಾಳುಮೆಣಸು ಬೆಳೆಗೂ ಅತಿ ಯಾದ ಮಳೆ ಹಾಗೂ ಬೇಸಿಗೆಯ ಕಡಿಮೆ ಮಳೆಯಿಂದ ಬೆಳೆ ಹಾನಿ ಸಂಭವಿಸಿರುವುದಕ್ಕೆ ಸಿದ್ಧಪಡಿಸಿರುವ ಟರ್ಮ್ ಶೀಟ್‌ಗಳ ಹಾನಿಯ ತೀವ್ರತೆ ಗನುಸಾರ ವಿಮಾ ಆರ್ಥಿಕ ಸುರಕ್ಷತೆ ಪಡೆಯಲು ಅವಕಾಶವಿದೆ.
2016-17ನೇ ಸಾಲಿನಲ್ಲಿ ಹವಾಮಾನ ವೈಪರೀತ್ಯದನುಸಾರ ಉಡುಪಿ ಜಿಲ್ಲೆಯಲ್ಲಿ ಹವಾಮಾನಾಧಾರಿತ ಬೆಳೆವಿಮೆ ಯೋಜನೆಯಡಿ 210.16 ಲಕ್ಷ ರೂ.ಗಳ ವಿಮಾ ಪರಿಹಾರವನ್ನು ಒದಗಿಸಲು ವಿಮೆ ಕಂಪನಿ ಪ್ರಾರಂಭಿಸಿದ್ದು, ಇದರಲ್ಲಿ 158.93 ಲಕ್ಷ ರೂ. ಪರಿಹಾರ ಈಗಾಗಲೇ ರೈತರ ಉಳಿತಾಯ ಖಾತೆಗೆ ಜಮೆ ಆಗಿದೆ.
Next Story





