ಜು.13ರಂದು ಎಂಎಲ್‌ಎ ಕನ್ನಡ ಚಲನಚಿತ್ರ ಬಿಡುಗಡೆ
ಮಂಗಳೂರು, ಜೂ.27: ತ್ರಿವೇಣಿ 24 ಕ್ರಾಫ್ಟ್ಸ್‌ನಡಿ ನಿರ್ಮಾಣಗೊಂಡಿರುವ ಎಂಎಲ್‌ಎ ಕನ್ನಡ ಚಲನಚಿತ್ರ ಜು.13ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇ ವೌರ್ಯ ಮಂಜುನಾಥ್ ಹೇಳಿದರು.
ಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಮಾಜಿ ಸಚಿವ ಎಚ್.ಎಂ. ರೇವಣ್ಣ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದು, ಸಾರಿಗೆ ಸಚಿವರಾಗಿದ್ದ ವೇಳೆ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಅವರು ಬರೀ ಒಂದೇ ಟೇಕ್‌ನಲ್ಲಿ ಶೂಟಿಂಗ್ ನಿಭಾಯಿಸಿದ್ದಾರೆ ಎಂದರು.
ಚಿತ್ರದಲ್ಲಿ ಕನ್ನಡ ಮತ್ತು ಚುಳುವಿನ ಕಲಾವಿದರು, ತಂತ್ರಜ್ಞರು ಕೊಡುಗೆಯನ್ನು ನೀಡಿದ್ದಾರೆ. ಚಿತ್ರವು ಉಡುಪಿ ಮತ್ತು ದ.ಕ. ಜಿಲ್ಲೆಗೆ ನಂಟಿರುವ ಚಿತ್ರವಾಗಿದೆ ಎಂದು ಅವರು ಹೇಳಿದರು.
ಚಿತ್ರಕ್ಕೆ ವಿಕ್ರಮ್ ಸುಬ್ರಹ್ಮಣ್ಯ ಸಂಗೀತ ನೀಡಿದ್ದು, ಕೆ.ಆರ್. ಲಿಂಗರಾಜು ಸಂಪಾದನೆ ಮಾಡಿದ್ದಾರೆ. ಹರಿಚರಣ್, ರಂಜಿತ್, ಅಭಿಜಿತ್ ರಾವ್, ವಿಕ್ರಮ್ ಸುಬ್ರಹ್ಮಣ್ಯ, ಮಾಧುರಿ ಹಿನ್ನೆಲೆಯ ಗಾಯನ ಮಾಡಿದ್ದು, ಚಿತ್ರದಲ್ಲಿ ಪ್ರಥಮ್ ನಾಯಕನಾಗಿ, ಸೋಲ್ ಮೊಂತೆರೋ ನಾಯಕಿಯಾಗಿ ನಟಿಸಿದ್ದಾರೆ. ಸ್ಪರ್ಶ ರೇಖಾ,. ನವೀನ್ ಡಿ. ಪಡೀಲ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ವೌರ್ಯ ಮಂಜುನಾಥ್ ಹೇಳಿದರು.
ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಚಿತ್ರವೊಂದರಲ್ಲಿ ಅಭಿನಯ ಹೊಸ ಅನುಭ ನೀಡಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ವೆಂಕಟೇಶ್ ರೆಡ್ಡಿ, ಸಹ ನಿರ್ಮಾಪಕ ವೆಂಕಿ ಪಲುಗುಳ್ಳ, ಕಿಶೋರ್ ಡಿ. ಶೆಟ್ಟಿ ಉಪಸ್ಥಿತರಿದ್ದರು.







