ಜೂ.28ರಂದು ಉಡುಪಿ ಜಿಲ್ಲೆಗೆ ತೊನ್ನು ರೋಗ ಜಾಗೃತಿ ರಥ
ಉಡುಪಿ, ಜೂ.27: ಕರ್ನಾಟಕ ಚರ್ಮರೋಗ ತಜ್ಞರ ಸಂಘದ ವತಿ ಯಿಂದ ವಿಶ್ವ ತೊನ್ನು ದಿನಾಚರಣೆಯ ಪ್ರಯುಕ್ತ ತೊನ್ನು ರೋಗದ ಕುರಿತು ಜನರಲ್ಲಿರುವ ಭಯ ಹಾಗೂ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಹಮ್ಮಿ ಕೊಳ್ಳಲಾಗಿರುವ ಜಾಗೃತಿ ರಥವು ಜೂ.28ರಂದು ಉಡುಪಿ ಜಿಲ್ಲೆಗೆ ಆಗಮಿಸ ಲಿದೆ ಎಂದು ಸಂಘದ ಸದಸ್ಯ ಹಾಗೂ ಉಡುಪಿಯ ಚರ್ಮರೋಗ ತಜ್ಞ ಡಾ. ಸುಭಾಷ್ ಕಿಣಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.25ರಂದು ಬೆಂಗಳೂರಿನಿಂದ ಹೊರಟ ರಥವು ಜೂ.28ರಂದು ಮಂಗ ಳೂರಿಗೆ ಆಗಮಿಸಿ, ಅಲ್ಲಿಂದ ಮೂಡಬಿದ್ರೆ, ಕಾರ್ಕಳ ಮಾರ್ಗವಾಗಿ ಸಂಜೆ ವೇಳೆ ಮಣಿಪಾಲಕ್ಕೆ ಬರಲಿದೆ. 29ರಂದು ಉಡುಪಿಗೆ ಆಗಮಿಸುವ ರಥವು ಸರ್ವಿಸ್ ಹಾಗೂ ಸಿಟಿ ಬಸ್ ನಿಲ್ದಾಣಗಳಲ್ಲಿ ತೊನ್ನು ರೋಗದ ಬಗ್ಗೆ ಜಾಗೃತಿ ಮೂಡಿಸಲಿದೆ. ಇದರಲ್ಲಿ ತಜ್ಞ ವೈದ್ಯರು ಕೂಡ ಪಾಲ್ಗೊಳ್ಳಲಿರುವರು ಎಂದರು.
ತೊನ್ನು ರೋಗವನ್ನು ಪ್ರಾರಂಭದ ಹಂತದಲ್ಲೇ ಗುರುತಿಸಿ ಸರಿಯಾದ ಚಿಕಿತ್ಸೆ ನೀಡಿದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಈ ರೋಗ ವನ್ನು ದೇವರ ಶಾಪ ಎಂಬಿತ್ಯಾದಿ ಮೂಢನಂಬಿಕೆಯಿಂದ ನಿರ್ಲಕ್ಷಿಸಿ ಉಲ್ಬಣ ಗೊಳ್ಳುವಂತೆ ಮಾಡಿದರೆ ನಂತರ ಅದಕ್ಕೆ ಚಿಕಿತ್ಸೆ ನೀಡುವುದು ಕಷ್ಟಸಾಧ್ಯ ಎಂದು ಅವರು ಹೇಳಿದರು.
ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ.ಸ್ಮಿತಾ ಪ್ರಭು ಮಾತನಾಡಿ, ವಿಶ್ವ ತೊನ್ನು ದಿನಾಚರಣೆಯ ಪ್ರಯುಕ್ತ ಆಸ್ಪತ್ರೆಯಲ್ಲಿ ಜೂ.25 ರಿಂದ 30ರವರೆಗೆ ಚರ್ಮ ತಜ್ಞ ವೈದ್ಯರ ಜೊತೆಗೆ ಉಚಿತ ಸಮಾಲೋಚನೆ ಯೊಂದಿಗೆ ವಿಶೇಷ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಕಾಯಿಲೆಯು ನೋವು ಇಲ್ಲದ ಜೀವಕ್ಕೆ ಅಪಾಯಕಾರಿಯೂ ಅಲ್ಲದ ಚರ್ಮದ ಒಂದು ರೋಗ ಸ್ಥಿತಿ ಯಾಗಿದ್ದು, 10ರಿಂದ 30ವರ್ಷ ಪ್ರಾಯದ ಪುರುಷ ಹಾಗೂ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆಯ ಉಪ ವ್ಯವಸ್ಥಾಪಕ ಮೋಹನ್ ಶೆಟ್ಟಿ, ಡಾ.ವರ್ಷ ಶೆಟ್ಟಿ ಉಪಸ್ಥಿತರಿದ್ದರು.







