ಜೂ.30ರಂದು ಪೊಳಲಿ ಪ್ರಶಸ್ತಿ ಪ್ರದಾನ
ಉಡುಪಿ, ಜೂ.27: ತುಳು ಸಾಹಿತ್ಯ, ಸಂಶೋಧನ ರಂಗದಲ್ಲಿಲ್ಲಿ ವಿಶೇಷ ಸೇವೆ ಸಲ್ಲಿಸಿದ ಪೊಳಲಿ ಶೀನಪ್ಪಹೆಗ್ಡೆ ಹಾಗೂ ಎಸ್.ಆರ್. ಹೆಗ್ಡೆ ನೆನಪಿನಲ್ಲಿ ನೀಡುವ ಪ್ರಶಸ್ತಿಯನ್ನು ಇತಿಹಾಸಕಾರ, ಸಂಶೋಧಕ ಡಾ.ಬಿ.ಜಗದೀಶ್ ಶೆಟ್ಟರಿಗೆ ಜೂ.30ರಂದು ಬೆಳಗ್ಗೆ 10:30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟದಲ್ಲಿ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮವನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜ್ಯುಕೇಶನ್ ಜಂಟಿಯಾಗಿ ಆಯೋಜಿಸಿದೆ. ಅಧ್ಯಕ್ಷತೆಯನ್ನು ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ವಹಿಸಲಿದ್ದು, ಅಕಾಡೆಮಿಯ ಆಡಳಿತಾಧಿಕಾರಿ ಡಾ ಎಚ್. ಶಾಂತಾರಾಮ್ ಮುಖ್ಯ ಅತಿಥಿಯಾಗಿರುವರು. ಪ್ರಾಧ್ಯಾಪಕ ಡಾ.ಸುರೇಶ್ ರೈ ಅಭಿನಂದನಾ ಭಾಷಣ ಮಾಡಲಿರುವರು.ಪ್ರಶಸ್ತಿ ಸಮಿತಿ ಡಾ.ಇಂದಿರಾ ಹೆಗ್ಡೆ ಉಪಸ್ಥಿತರಿವರು.
ಖ್ಯಾತ ಇತಿಹಾಸ ಸಂಶೋಧಕ ಡಾ.ಪುಂಡಿಕಾ ಗಣಪಯ್ಯ ಭಟ್ ‘ತುಳುವ ಇತಿಹಾಸ: ಪೊಳಲಿ ಶೀನಪ್ಪ ಹೆಗ್ಗಡೆಯವರ ಸೃಷ್ಟಿ, ದೃಷ್ಟಿ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
Next Story





