ಮಂಡ್ಯ: ನಿಂತಿದ್ದ ಲಾರಿಗೆ ಕಾರು ಢಿಕ್ಕಿ; ಇಬ್ಬರು ಮೃತ್ಯು

ಮಂಡ್ಯ, ಜೂ.27: ಮೈಸೂರು ಕಡೆಗೆ ಚಲಿಸುತ್ತಿದ್ದ ದಿನಪತ್ರಿಕೆಯ ಬಂಡಲ್ ಸಾಗಿಸುವ ತವೇರಾ ಕಾರು ನಿಂತಿದ್ದ ಲಾರಿಗೆ ಢಿಕ್ಕಿಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಮೈಸೂರು ಹೆದ್ದಾರಿಯ ತಾಲೂಕಿನ ಕಾಳೇನಹಳ್ಳಿ ಗ್ರಾಮದ ತಿರುವಿನಲ್ಲಿ ಜರುಗಿದೆ.
ಬುಧವಾರ ಮುಂಜಾನೆ 4 ಸಮಯದಲ್ಲಿ ಈ ಘಟನೆ ನಡೆದಿದ್ದು, ತವೇರಾದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಸದ್ದಾಂ ಮತ್ತು ಪರ್ವೇಜ್ ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿ ಪರಾರಿಯಾಗಿದ್ದಾನೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಿದ್ದಾರೆ.
Next Story





