ಮೋಕೆದ ಪೊಣ್ಣು ತುಳು ಅಲ್ಬಾಂ ಸಾಂಗ್ ಬಿಡುಗಡೆ

ಮಲ್ಪೆ, ಜೂ. 27: ಟಾಪ್‌ಗ್ರೀನ್ ಪ್ರೊಡಕ್ಷನ್ ಅವರ ಶ್ರೇಯಸ್ ಜಿ.ತೊಟ್ಟಂ ನಿರ್ದೇಶನದಲ್ಲಿ ಮಲ್ಪೆಯ ಯುವ ಕಲಾವಿದ ಚೇತನ್ ಬಾಪುತೋಟ ಮತ್ತು ಆಶಿಕ ಅಭಿನಯದ ‘ಮೋಕೆದ ಪೊಣ್ಣು’ ಅಲ್ಬಂ ಸಾಂಗ್ ಬಿಡುಗಡೆ ಕಾರ್ಯ ಕ್ರಮವು ಇತ್ತೀಚೆಗೆ ಮಲ್ಪೆ ಪಡುಗುಡ್ಡೆ ಶ್ರೀಸರ್ವೇಶ್ವರ ದೇವಸ್ಥಾನದಲ್ಲಿ ಜರಗಿತು.
ಅಲ್ಬಂನ್ನು ಮಾಜಿ ಸೈನಿಕ ಗಿಲ್ಬರ್ಟ್ ಬ್ರಿಗಾಂಝ ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರ ಪಡುಗುಡ್ಡೆ ಸರ್ವೇಶ್ವರ ದೇವಸ್ಥಾನದ ಅಧ್ಯಕ್ಷ ದಿನೇಶ್ ಜಿ. ಸುವರ್ಣ, ಕ್ಷೇತ್ರಾಡಳಿತ ಅಧ್ಯಕ್ಷ ಗಣೇಶ್ ಅಮೀನ್, ಮಲ್ಪೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಮೈಂದನ್, ರೋಯಲ್ ಫಿಶರೀಶ್‌ನ ಮನೋಜ್ ಕರ್ಕೇರ, ಮುಕ್ತ ಟಿವಿ ನಿರೂಪಕ ತೇಜಸ್ ಪೂಜಾರಿ, ನಾಯಕಿ ಆಶಿಕಾ ಮೊದಲಾದವರು ಉಪಸ್ಥಿತರಿದ್ದರು.
ನಾಯಕ ನಟ ಚೇತನ್ ಬಾಪುತೋಟ ಸ್ವಾಗತಿಸಿದರು. ಎಂ.ಮಹೇಶ್ ಬಂಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story





