ಬಾಗೇಪಲ್ಲಿ: ಮಹಿಳೆಯ ಬೆದರಿಸಿ ಚಿನ್ನಾಭರಣ ದರೋಡೆ
ಬಾಗೇಪಲ್ಲಿ,ಜೂ.27: ಹಾಡು ಹಗಲೇ ದರೋಡೆಕೋರರು ಆಯುಧಗಳಿಂದ ಬೆದರಿಸಿ ಮಹಿಳೆಯೊಬ್ಬರ ಚಿನ್ನದ ಒಡವೆಗಳನ್ನು ಕಿತ್ತು ಪರಾರಿಯಾಗಿರುವ ಘಟನೆ ಬಾಗೇಪಲ್ಲಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಹೊರವಲಯದ ಕೆಎಸ್‍ಆರ್‍ಟಿಸಿ ಡಿಪೋಗೆ ಹೋಗುವ ರಸ್ತೆಯಲ್ಲಿರುವ ಸುಮಿತ್ರಮ್ಮ ಎಂಬವರ ಮನೆಗೆ ಸುಮಾರು 11 ಗಂಟೆ ಸಮಯದಲ್ಲಿ 3 ಜನರಿದ್ದ ತಂಡ ವಿಳಾಸ ಕೇಳುವ ನೆಪದಲ್ಲಿ ನುಗ್ಗಿ ಮಚ್ಚು ಮತ್ತು ಚಾಕು ಮುಂತಾದ ಆಯುಧಗಳಿಂದ ಬೆದರಿಸಿ, ಮಹಿಳೆಯ ಮೈಮೇಲಿದ್ದ ಸುಮಾರು 1.50 ಲಕ್ಷ ಬೆಳೆಬಾಳುವ ಚಿನ್ನದ ಮಾಂಗಲ್ಯ ಸರ ಓಲೆಗಳನ್ನು ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ.
ನಂತರ ಬೀರುವಲ್ಲಿದ್ದ ನಗದು ಮತ್ತು ಚಿನ್ನದ ಒಡವೆ ಕೊಡುವಂತೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯ ತಂದೆ ಮನೆಗೆ ಬರುತ್ತಿರುವುದನ್ನು ಗಮನಿಸಿದ ದರೋಡೆಕೋರರು ಮಹಿಳೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳದು ಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ದರೋಡೆಕೋರರಿಗಾಗಿ ಬಲೆ ಬೀಸಿದ್ದಾರೆ. ಈ ಸಂದರ್ಭದಲ್ಲಿ ಡಿವೈಎಸ್‍ಪಿ ಪ್ರಭುಶಂಕರ್, ಸಿಐ ಗೋವಿಂದರಾಜುಲು, ಪಿಎಸೈ ಸಂದೀಪ್, ಅಪರಾದ ವಿಭಾಗದ ಪಿಎಸ್‍ಐ ಮುದ್ದಯ್ಯ ಮತ್ತಿತರರು ಹಾರಿದ್ದರು.







