ಅಕ್ರಮ ವಲಸಿಗರ ಬಂಧನಕ್ಕೆ ಹಿಂದೇಟು ಹಾಕಿದ ಪೊಲೀಸ್
ವಾಶಿಂಗ್ಟನ್, ಜೂ. 27: ಅಕ್ರಮ ವಲಸಿಗ ಕುಟುಂಬಗಳನ್ನು ಬಂಧಿಸುವುದಕ್ಕೆ ಅಮೆರಿಕದ ಪೊಲೀಸ್ ಮುಖ್ಯಸ್ಥರು ಹಿಂದೇಟು ಹಾಕಿದ್ದಾರೆ. ಬಂಧನದಿಂದ ಮಕ್ಕಳ ಮೇಲೆ ಆಗುವ ದುಷ್ಪರಿಣಾಮಗಳು ಹಾಗೂ ಅದಕ್ಕೆ ತಗಲುವ ಅಗಾಧ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ಕ್ರಮಗಳನ್ನು ಶೋಧಿಸಬೇಕು ಎಂದು ಅವರು ಶ್ವೇತಭವನವನ್ನು ಒತ್ತಾಯಿಸಿದ್ದಾರೆ.
ಅಕ್ರಮ ವಲಸಿಗರನ್ನು ಬಂಧಿಸುವ ಬದಲು, ಕುಟುಂಬಗಳ ಮುಖ್ಯಸ್ಥರು ಜಿಪಿಎಸ್ ಕಾಲುಂಗುರಗಳನ್ನು ಧರಿಸುವುದು ಅಥವಾ ನಿಯಮಿತ ಟೆಲಿಫೋನ್ ತಪಾಸಣೆಗೆ ಒಳಪಡುವುದು ಮುಂತಾದ ಪರ್ಯಾಯ ಕ್ರಮಗಳನ್ನು ಪರಿಶೀಲಿಸುವಂತೆ 45ಕ್ಕೂ ಅಧಿಕ ರಾಜ್ಯಗಳ ಪೊಲೀಸ್ ಮುಖ್ಯಸ್ಥರು ಜಂಟಿ ಪತ್ರವೊಂದರಲ್ಲಿ ಟ್ರಂಪ್‌ರನ್ನು ಒತ್ತಾಯಿಸಿದ್ದಾರೆ.
Next Story





