ಮೊದಲ ಟ್ವೆಂಟಿ-20: ಭಾರತಕ್ಕೆ 76 ರನ್‌ಗಳ ಜಯ

ಡಬ್ಲಿನ್, ಜೂ.27: ಐರ್ಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಬುಧವಾರ 76 ರನ್‌ಗಳ ಜಯ ಗಳಿಸಿದೆ.
ಗೆಲುವಿಗೆ 209 ರನ್‌ಗಳ ಗೆಲುವಿನ ಸವಾಲನ್ನು ಪಡೆದ ಐರ್ಲೆಂಡ್ ತಂಡ ಕುಲ್‌ದೀಪ್ ಯಾದವ್ (21ಕ್ಕೆ 4), ಯಜುವೇಂದ್ರ ಚಹಾಲ್(38ಕ್ಕೆ 3) ಮತ್ತು ಜಸ್‌ಪ್ರೀತ್ ಬುಮ್ರಾ (19ಕ್ಕೆ 2) ದಾಳಿಗೆ ಸಿಲುಕಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 132 ರನ್ ಗಳಿಸಿತು.
ಐರ್ಲೆಂಡ್ ತಂಡದ ಜೇಮ್ಸ್ ಶ್ಯಾನನ್(60) ಗರಿಷ್ಠ ಸ್ಕೋರ್ ದಾಖಲಿಸಿದರು. ಭಾರತ 208/5: ಭಾರತ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 208 ರನ್ ಗಳಿಸಿತ್ತು.
ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮಾ 97 ರನ್ (61ಎ, 8ಬೌ,5ಸಿ) ಮತ್ತು ಶಿಖರ್ ಧವನ್ 74ರನ್(45ಎ, 5ಬೌ,5ಸಿ) ಗಳಿಸಿದರು. ಇವರು ಮೊದಲ ವಿಕೆಟ್‌ಗೆ 160 ರನ್‌ಗಳ ಜೊತೆಯಾಟ ನೀಡಿದರು.
ವಿಕೆಟ್ ಕೀಪರ್ ಎಂಎಸ್ ಧೋನಿ 11ರನ್, ಸುರೇಶ್ ರೈನಾ 10ರನ್, ಹಾರ್ದಿಕ್ ಪಾಂಡ್ಯ ಔಟಾಗದೆ 6 ರನ್ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ (0)ಖಾತೆ ತೆರೆಯದೆ ನಿರ್ಗಮಿಸಿದ್ದರು..
,,,,,,,,,,





