ಕಾಪು ತಾಲ್ಲೂಕಿನಲ್ಲಿ 10 ಸಾವಿರ ಗಿಡ ನೆಡುವ ಯೋಜನೆ

ಕಾಪು, ಜೂ. 28: ಕಾಪು ತಾಲ್ಲೂಕಿನಾದ್ಯಂತ ವಿವಿಧ ಜಾತಿಯ ಸುಮಾರು 10 ಸಾವಿರ ಗಿಡಗಳನ್ನು ನೆಡುವ ನಿಟ್ಟಿನಲ್ಲಿ ಇಲಾಖೆ ಯೋಜನೆ ರೂಪಿಸಲಾಗಿದೆ ಎಂದು ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ಹೇಳಿದರು.
ಅವರು ಅರಣ್ಯ ಇಲಾಖೆ ಉಡುಪಿ ವಲಯ ಮತ್ತು ಪಡುಬಿದ್ರಿ ಘಟಕ, ಸರ್ಕಾರಿ ಪದವಿ ಪೂರ್ವ ಕಾಲೇಜು ಪೊಲಿಪು ಹಾಗೂ ಜೆಸಿಐ ಕಾಪು ಇವರ ಜಂಟಿ ಆಶ್ರಯದಲ್ಲಿ ಪೊಲಿಪು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ವನಮಹೋತ್ವಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, ವರ್ಷಕ್ಕೊಮ್ಮೆ ನಡೆಸುವ ವನ ಮಹೋತ್ಸವ ಕಾರ್ಯಕ್ರಮ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿರದೇ ವರ್ಷದಿಂದ ವರ್ಷಕ್ಕೆ ಸಸ್ಯ ಸಂಪತ್ತಿನ ಬೆಳವಣಿಗೆ ಪೂರಕವಾಗಿರಬೇಕು ಎಂದರು.
ಜೆಸಿಐ ವಲಯ ಫೌಂಡೇಶನ್ ನಿರ್ದೇಸಕ ವೈ.ಸುಕುಮಾರ್, ಜೆಸಿಐ ವಲಯಾಧ್ಯಕ್ಷ ರಾಕೇಶ್ ಕುಂಜೂರು, ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಪವಲಯ ಅರಣ್ಯಾಧಿಕಾರಿ ಅಭಿಲಾಷ್, ಕಾಲೇಜಿನ ಪ್ರಾಂಶುಪಾಲ ಫಂಡರಿನಾಥ್ ಎಸ್, ಕಾಪು ಪುರಸಭೆ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು, ವಿದ್ಯಾರ್ಥಿ ಸಂಘದ ಸಿದ್ಧಪ್ಪ, ಸಚಿನ್ ಕುಮಾರ್ ಉಪಸ್ಥಿತರಿದ್ದರು.
ಕಾಪು ಜೆಸಿಐ ಅಧ್ಯಕ್ಷ ರಮೇಶ್ ನಾಯಕ್, ಹೈಸ್ಕೂಲ್ ವಿಭಾಗದ ಮುಖ್ಯಸ್ಥೆ ರಮಣಿ ವೈ, ಕಾಲೇಜಿನ ಉಪನ್ಯಾಸಕ ನಿಂಗಯ್ಯ ಉಪಸ್ಥಿತರಿದ್ದರು.







