ಹನೂರು: ಆನೆ ದಾಳಿ; ವ್ಯಕ್ತಿಗೆ ಗಾಯ
ಹನೂರು,ಜೂ.28: ಹನೂರು ತಾಲೂಕಿನ ಬೂದಿಪಡಗ ಸಮೀಪದ ಕೌಳ್ಳಿಹಳ್ಳ ಡ್ಯಾಮ್‍ನ ನಿವಾಸಿ ಅಡ್ಡಗಾಲು ಸಿದ್ದೇಗೌಡ ಎಂಬವರಿಗೆ ಆನೆ ತುಳಿದು ಪರಿಣಾಮ ಅವರ ಕಾಲುಗಳಿಗೆ ತೀವ್ರ ಗಾಯವಾಗಿರುವ ಘಟನೆ ವರದಿಯಾಗಿದೆ
ಬೂದಿಪಡಗ ಗ್ರಾಮದ ಶನಿಮಹಾತ್ಮ ದೇವಸ್ಥಾನದ ಹಿಂಬಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಇವರು ಜಾನುವಾರುಗಳನ್ನು ಮೇಯಿಸುತ್ತಿದ್ದ ಸಂದರ್ಭ ಆನೆಯ ತುಳಿತಕ್ಕೆ ಒಳಗಾಗಿದ್ದು, ಅದೃಷ್ಟವಾಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆ ತಿಳಿದ ಕೂಳ್ಳೇಗಾಲ ವನ್ಯಜೀನಿ ವಲಯ ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶ ಆರ್‍ಎಫ್‍ಒ ಧನು, ಅರಣ್ಯಾಧಿಕಾರಿ ಪ್ರಭುಸ್ವಾಮಿ ಮತ್ತು ತಂಡ ತಕ್ಷಣ ಸ್ಥಳಕ್ಕೆ ಆಗಮಿಸಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಅನಂತರ ಆಂಬುಲೆನ್ಸ್ ಮುಖಾಂತರ ಕೊಳ್ಳೇಗಾಲ ಆಸ್ಪತ್ರೆಗೆ ರವಾನಿಸಿದ್ದಾರೆ
Next Story





