ಗುರುಪುರ ನದಿಯಲ್ಲಿ ಮುಳುಗಿ ಯುವಕ ನಾಪತ್ತೆ
ಮಂಗಳೂರು, ಜೂ.28: ನಗರದ ಕಸಬಾ ಬೆಂಗ್ರೆಯ ಸಮೀಪದ ಅಳಿವೆ ಬಾಗಿಲು ಗುರುಪುರ ನದಿಯಲ್ಲಿ ಈಜುತ್ತಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.
ಕೋಡಿ ಉಳ್ಳಾಲ ನಿವಾಸಿ ಅಲ್‌ಅಮೀನ್ (28) ನದಿಯಲ್ಲಿ ಮುಳುಗಿ ನಾಪತ್ತೆಯಾದವರು ಎಂದು ತಿಳಿದುಬಂದಿದೆ.
ಕೋಡಿ ಉಳ್ಳಾಲದಿಂದ ಜೂ.27ರಂದು ಬೆಳಗ್ಗೆ 10ಕ್ಕೆ ಅಲ್‌ಅಮೀನ್ ತನ್ನ ಚಿಕ್ಕಮ್ಮನ ಮನೆಯಾದ ಕಸಬಾ ಬೆಂಗ್ರೆಗೆ ಹೋಗಿದ್ದು, ಮಧ್ಯಾಹ್ಮ 2 ಗಂಟೆಗೆ ಸಮೀಪದ ಅಳಿವೆ ಬಾಗಿಲು ಗುರುಪುರ ನದಿಯಲ್ಲಿ ಈಜಾಡುತ್ತಿದ್ದ ವೇಳೆ ಭಾರೀ ಮಳೆ-ಗಾಳಿ ಬೀಸಿದ ಪರಿಣಾಮ ಅಲ್‌ಅಮೀನ್ ನದಿಯಲ್ಲಿ ಮುಳುಗಿ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





