ಜು.5ರಂದು ಮಸ್ಜಿದು ತಖ್ವಾದಲ್ಲಿ ಹಜ್ ತರಬೇತಿ ಶಿಬಿರ
ಮಂಗಳೂರು, ಜೂ.28: ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಪಂಪ್‌ವೆಲ್ ಇದರ ವತಿಯಿಂದ ಜು. 5ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12:30ರ ವರೆಗೆ ಪಂಪ್‌ವೆಲ್‌ನ ಮಸ್ಜಿದು ತಖ್ವಾದಲ್ಲಿ ಹಜ್ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯನ್ನು ಉಡುಪಿ ಹಾಗೂ ಚಿಕ್ಕಮಗಳೂರು ಖಾಝಿ ಅಲ್ಹಾಜ್ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಡೆಸಿಕೊಡಲಿದ್ದಾರೆ. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಲಾಗಿದ್ದು, ಹಜ್ ಯಾತ್ರಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬೇಕಾಗಿ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಅಲ್ಹಾಜ್ ಬಿ.ಎಂ.ಮುಮ್ತಾಝ್ ಅಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





