ಸಖರಾಯಪಟ್ಟಣ: 10 ಕ್ಕೂ ಹೆಚ್ಚು ಕುರಿಗಳ ಮೇಳೆ ದಾಳಿ ಮಾಡಿದ ತೋಳ

ಸಖರಾಯಪಟ್ಟಣ, ಜೂ.28: ಕರಿಗಳ ಮೇಲೆ ತೋಳವೊಂದು ದಾಳಿ ಮಾಡಿ 10ಕ್ಕೂ ಹೆಚ್ಚು ಕುರಿಗಳನ್ನು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಇಲ್ಲಿಗೆ ಸಮೀಪದ ಕುನ್ನಾಳು ಗ್ರಾಮದಲ್ಲಿ ವರದಿಯಾಗಿದೆ.
ಕುನ್ನಾಳು ಗ್ರಾಮದ ಲಲಿತಮ್ಮ ಎಂಬವರಿಗೆ ಸೇರಿದ ಕುರಿಗಳ ದೊಡ್ಡಿಗೆ ಬುಧವಾರ ರಾತ್ರಿ ತೋಳವೊಂದು ದಾಳಿ ಮಾಡಿದ್ದು, ಕುರಿಗಳ ಕಿರುಚಾಟದಿಂದ ಹೊರ ಬಂದ ಲಲಿತಮ್ಮರಿಗೆ ತೋಳವು ಕುರಿಯೊಂದನ್ನು ಕಚ್ಚಿ ಎಳೆದೊಯ್ಯುತ್ತಿದ್ದ ದೃಶ್ಯ ಕಂಡಿದೆ ಎನ್ನಲಾಗಿದ್ದು, ಈ ವೇಳೆ ಕುರಿಯ ರಕ್ಷಣೆಗೆ ಲಲಿತಮ್ಮ ಮುಂದಾದಾಗ ತೋಳ ಆಕೆ ಮೇಲೂ ದಾಳಿ ಮಾಡಿ ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ.
ನಂತರ ಮಹಿಳೆಯ ಕಿರುಚಾಟದಿಂದ ತೋಳ ಕುರಿಯನ್ನು ಬಿಟ್ಟು ಓಡಿ ಹೋಗಿದೆ ಎಂದು ತಿಳಿದು ಬಂದಿದ್ದು, ದಾಳಿಯಲ್ಲಿ ಲಲಿತಮ್ಮಳಿಗೆ ಸೇರಿದ 10ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ ಎಂದು ತಿಳಿದು ಬಂದಿದೆ.
Next Story





