ಜು 3: ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಹಜ್ಜ್ ತರಬೇತಿ
ಮಂಗಳೂರು, ಜೂ. 29: ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು, ಇದರ ವತಿಯಿಂದ ಜು.3ರಂದು ಹಜ್ಜ್ ತರಬೇತಿ ಶಿಬಿರ ಆಯೋಜಿಸಿಲಾಗಿದೆ.
ಕಾರ್ಯಕ್ರಮವು ಬೆಳಗ್ಗೆ 10 ರಿಂದ ಸಂಜೆ 3ರವರೆಗೆ ಮಂಗಳೂರು ನಗರದ ಬಂದರಿನ ಬೀಬಿ ಅಲಾಬಿ ರಸ್ತೆಯಲ್ಲಿರುವ ಹಿದಾಯತ್ ಸೆಂಟರ್ ಸಭಾಂಗಣದಲ್ಲಿ ನಡೆಯಲಿದೆ.
ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಮೌಲಾನ ಯಹ್ಯಾ ತಂಙಳ್ ಮದನಿ, ಬ್ಯಾರಿ ಭಾಷೆಯಲ್ಲಿ, ಮೌಲಾನ ಮುಫ್ತಿ ಅಬ್ದುಲ್ ಮನ್ನಾನ್ ಸಾಹೇಬ್ ಉರ್ದು ಭಾಷೆಯಲ್ಲಿ, ಮುಹಮ್ಮದ್ ಕುಂಞಿ ಕನ್ನಡದಲ್ಲಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಉಪ್ಪಿನಂಗಡಿ ಸಮಾರೋಪ ನುಡಿಗಳೊಂದಿಗೆ ಕಾರ್ಯಕ್ರಮವು ಮುಕ್ತಾಯವಾಗಲಿದೆ.
ವಿಶೇಷ ಆಕರ್ಷಣೆಯಾಗಿ ಕಾರ್ಯಕ್ರಮದಲ್ಲಿ ಹಜ್ಜ್ ಪ್ರಾತಕ್ಷಿಕೆಯ ಸಿ.ಡಿ. ಪ್ರದರ್ಶನವಿರುವುದು. ಹಜ್ಜ್ ಗೆ ತೆರಳುವವರು ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ 9449470967, 9845665198 ಅನ್ನು ಸಂಪರ್ಕಿಸಬಹುದು.