5 ಸಾವಿರ ರೂ.ಲಂಚ ಪಡೆಯುತ್ತಿದ್ದ ವೇಳೆ ಠಾಣಾ ರೈಟರ್ ಎಸಿಬಿ ಬಲೆಗೆ

ಬೆಂಗಳೂರು, ಜೂ.29: ಜಪ್ತಿಯಾಗಿದ್ದ ವಾಹನ ಬಿಡುಗಡೆಗೆ ಲಂಚ ಕೇಳಿದ ಪೊಲೀಸ್ ಠಾಣಾ ಬರಹಗಾರ(ರೈಟರ್) ಎಸಿಬಿ ಬಲೆಗೆ ಬಿದಿದ್ದಾರೆ.
ಬೆಂಗಳೂರು ಹೊರವಲಯದ ಬಿಡದಿ ಪೊಲೀಸ್ ಠಾಣಾ ಬರಹಗಾರ ಶ್ರೀನಿವಾಸ್ ವಿರುದ್ಧ ಎಸಿಬಿ ಮೊಕದ್ದಮೆ ದಾಖಲು ಮಾಡಿದೆ.
ಬಿಡದಿ ನಿವಾಸಿಯೊಬ್ಬರು, ಇಲ್ಲಿನ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಅಪಘಾತ ಪ್ರಕರಣದಲ್ಲಿ ಜಪ್ತಿಯಾಗಿರುವ ತಮ್ಮ ವಾಹನ ಬಿಡುಗಡೆಗಾಗಿ ಕೋರಿದ್ದರು. ಆದರೆ, ಆರೋಪಿ ಶ್ರೀನಿವಾಸ, ವಾಹನ ಬಿಡುಗಡೆಗೆ 14 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಶುಕ್ರವಾರ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಆರೋಪಿ ಪೊಲೀಸ್ ಠಾಣಾ ಬರಹಗಾರ 5 ಸಾವಿರ ರೂ.ಲಂಚ ಸ್ವೀಕಾರ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ರಾಮನಗರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಗದು ವಶಕ್ಕೆ ಪಡೆದು, ತನಿಖೆ ಮುಂದುವರೆಸಿದ್ದಾರೆ.
Next Story





