ಟಿಆರ್ ಎಫ್: ಮಹಿಳೆಯರಿಗೆ ಉಚಿತ ಟೈಲರಿಂಗ್ ಸೆಂಟರ್‌ಗೆ ಅರ್ಜಿ ಆಹ್ವಾನ
ಮಂಗಳೂರು, ಜೂ. 29: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಉಚಿತ ಟೈಲರಿಂಗ್ ಸೆಂಟರ್ ತೆರೆಯಲು ಸಹಭಾಗಿಗಳಾಗಲು ಇಚ್ಛಿಸುವ ಸಂಘಟನೆಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈಗಾಗಲೇ ಸಂಸ್ಥೆಯ ವತಿಯಿಂದ ಮಹಿಳೆಯರಿಗೆ ಉಚಿತ ಟೈಲರಿಂಗ್ ಕೋರ್ಸುಗಳನ್ನು ಹಲವೆಡೆ ಯಶಸ್ವಿಯಾಗಿ ನಡೆಸಲಾಗಿದೆ. ಸಹಭಾಗಿ ಸಂಘಟನೆಗಳು ತಮ್ಮೂರಲ್ಲಿ ಸೆಂಟರ್ ತೆರೆಯಲು ಅಗತ್ಯ ಸ್ಥಳಾವಕಾಶವನ್ನು ಉಚಿತವಾಗಿ ಒದಗಿಸಿಕೊಡತಕ್ಕದ್ದು. ಹೊಲಿಗೆ ಯಂತ್ರಗಳನ್ನು ಮತ್ತು ಟೈಲರಿಂಗ್ ಶಿಕ್ಷಕಿಯನ್ನು ನಮ್ಮ ಸಂಸ್ಥೆಯಿಂದ ವ್ಯವಸ್ಥೆ ಮಾಡಲಾಗುವುದು.
ತರಬೇತಿಯ ಅವಧಿ 4 ತಿಂಗಳು. ಕನಿಷ್ಠ ವಿದ್ಯಾರ್ಥಿಗಳ ಸಂಖ್ಯೆ 70 ಇದ್ದವರಿಗೆ ಮಾತ್ರ ಅವಕಾಶ. ಟೈಲರಿಂಗ್ ಕಲಿಯಲು ಸೇರುವ ಮಹಿಳೆಯರ ಪಟ್ಟಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 30. ವರ್ಷಕ್ಕೆ ಆರು ಸ್ಥಳಗಳಲ್ಲಿ ಸೆಂಟರ್ ತೆರೆಯುವುದರಿಂದ ಮೊದಲು ಬಂದ ಅರ್ಜಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು.
ಆದುದರಿಂದ ಈ ಯೋಜನೆಯಲ್ಲಿ ಸಹಭಾಗಿಗಳಾಗಲು ಬಯಸುವ ಜಮಾಅತ್ ಕಮಿಟಿ, ಯಂಗ್‌ಮೆನ್ಸ್ ಮತ್ತು ಇನ್ನಿತರ ಸಂಘಸಂಸ್ಥೆಗಳು ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಅಧ್ಯಕ್ಷ ರಿಯಾರ್ ಕಣ್ಣೂರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಕಂಕನಾಡಿ, ಮಂಗಳೂರು-2, ದೂರವಾಣಿ: 0824-4267883, 9844773906, 9972283365







