ಉಡುಪಿ ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್: ಅಧ್ಯಕ್ಷರಾಗಿ ಸತೀಶ್ ಪೂಜಾರಿ

ಉಡುಪಿ, ಜೂ.29: ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಮಾಹಿತಿ ತಂತ್ರಜ್ಞಾನ ವಿಭಾಗದ (ಐಟಿ ಸೆಲ್) ಅಧ್ಯಕ್ಷರಾಗಿ ಸತೀಶ್ ಪೂಜಾರಿ ಕಲತ್ರಪಾದೆ ನೇಮಕ ಗೊಂಡಿದ್ದಾರೆ. ಇವರು ಈ ಹಿಂದೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಹಾಗೂ ಕಾರ್ಕಳ ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಕೋಮುವಾದವನ್ನು ಬಲವಾಗಿ ವಿರೋಧಿಸಿ ತಮ್ಮ ನೇರ ಬರವಣಿಗೆಯ ಮೂಲಕ ಗುರುತಿಸಿಕೊಂಡಿರುವ ಸತೀಶ್ ಪೂಜಾರಿ ಇವರನ್ನು ರಾಜ್ಯ ಕಾಂಗ್ರೆಸ್ ಐ.ಟಿ.ಸೆಲ್ ಅಧ್ಯಕ್ಷ ನಿರಂಜನ್ ರಾವ್, ಜಿಲ್ಲೆಯ ಕಾಂಗ್ರೆಸ್ ಐ.ಟಿ. ಸೆಲ್ ಅಧ್ಯಕ್ಷರಾಗಿ ನಿಯುಕ್ತಿಗೊಳಿಸಿದ್ದಾರೆ.
Next Story





