ದಲಿತ ಶಿಕ್ಷಕನಿಗೆ ಕಿರುಕುಳ: ದೂರು
ಮಣಿಪಾಲ, ಜೂ. 29: ಅಲೆವೂರು ನೆಹರೂ ಹೈಸ್ಕೂಲಿನ ಸಹಶಿಕ್ಷಕ, ಕೊಡವೂರು ಲಕ್ಷ್ಮೀನಗರ ನಿವಾಸಿ ರಘುವೀರ ಎಂ.(52) ಎಂಬವರಿಗೆ ಆಡಳಿತ ಮಂಡಳಿ ಕಾರ್ಯದರ್ಶಿ, ಮುಖ್ಯೋಪಾಧ್ಯಾಯಿನಿ ಹಾಗೂ ಸಹೋದ್ಯೋಗಿಗಳು ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2017/18ನೆ ಶೈಕ್ಷಣಿಕ ಸಾಲಿನ ಜೂ.1ರಿಂದ ಫೆಬ್ರವರಿ ತಿಂಗಳ ಕೊನೆಯ ವರೆಗೆ ಮುಖ್ಯೋಪಾದ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಘುವೀರ ಎಂ. ಅವರನ್ನು ಕಳೆದ ಒಂದು ತಿಂಗಳಿನಿಂದ ಶಾಲಾ ಆಡಳಿತ ಮಂಡಳಿಯ ಕಾರ್ಯ ದರ್ಶಿ ಪ್ರಶಾಂತ್ ಆಚಾರ್ಯ ಎಂಬವರು ಒತ್ತಾಯಪೂರ್ವಕವಾಗಿ ಮುಖ್ಯೊಪಾದ್ಯಾಯ ಸ್ಥಾನದಿಂದ ಕೆಳಗಿಳಿಸಿದ್ದಲ್ಲದೇ ಹೀಯಾಳಿಸಿ ನಿಂದನೆ ಮಾಡಿರುವುದಾಗಿ ದೂರಲಾಗಿದೆ.
ಅಲ್ಲದೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುಬ್ರಾಯ ನಾಯ್ಕ್, ಶಾಲಾ ಪ್ರಸ್ತುತ ಮುಖ್ಯೋಪಾದ್ಯಾಯಿನಿ ಅರ್ಚನಾ ಮತ್ತು ಶಾಲಾ ಕಛೇರಿ ಸಿಬ್ಬಂದಿ ಶೋಭಾ ಸೇರಿಕೊಂಡು ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ರಘುವೀರ ನೀಡಿದ ದೂರಿನಂತೆ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
Next Story





