ಮಲ್ಪೆ ಮದೀನ ಮಸೀದಿ ಆಡಳಿತಾಧಿಕಾರಿ ಅಧಿಕಾರ ಸ್ವೀಕಾರ
ಉಡುಪಿ, ಜೂ.29: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಗಳ ಆದೇಶದಂತೆ ಮಲ್ಪೆ ಮದೀನ ಮಸೀದಿಯ ಆಡಳಿ ತಾಧಿಕಾರಿಯಾಗಿ ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ಜೂ.21ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಮದೀನ ಮಸೀದಿಯು 2016ರ ಎ.4ರಿಂದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನೇರ ಆಡಳಿತಕ್ಕೆ ಒಳಪಟ್ಟಿದ್ದು, ಅಂದಿನ ಆಡಳಿತಾಧಿಕಾರಿಗಳು ಈ ಹಿಂದೆ ಇದ್ದ ಆಡಳಿತ ಸಮಿತಿಯಿಂದ ಅಧಿಕಾರ ವಹಿಸದೆ ಇದ್ದುದರಿಂದ ಉಡುಪಿ ಜಿಲ್ಲಾ ವಕ್ಫ್ ಕಚೇರಿಯ ವಕ್ಫ್ ಅಧಿಕಾರಿಯವರನ್ನು ಆಡಳಿತಾಧಿಕಾರಿ ಯನ್ನಾಗಿ ಮರು ನೇಮಕ ಮಾಡಿ ಆದೇಶಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಕೆ.ಪಿ.ಇಬ್ರಾಹಿಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





