ಬಡಾ ಗ್ರಾಪಂ: 33.60 ಲಕ್ಷ ರೂ.ವೆಚ್ಚದಲ್ಲಿ 6 ರಸ್ತೆಗಳ ಅಭಿವೃದ್ಧಿ

ಕಾಪು, ಜೂ.29: ಎಲ್ಲೂರು ಯುಪಿಸಿಎಲ್ ಸಂಸ್ಥೆಯು ಸಿಎಸ್‌ಆರ್ ಯೋಜನೆಯಡಿ ಬಡಾ ಗ್ರಾಪಂ ವ್ಯಾಪ್ತಿಯಲ್ಲಿ 33.60 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಿದ ಆರು ರಸ್ತೆಗಳ ಉದ್ಘಾಟನೆ ಇಂದು ನಡೆಯಿತು.
ಸುಭಾಷ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿವರೆಗೆ, ವಾರ್ಡ್ ಸಂಖ್ಯೆ 6ರ ಪೊಲ್ಯ ಬರ್ಪಾಣೆ ರಸ್ತೆ, ವಾರ್ಡ್ 4ರ ದೇಜಾಡಿ ರಸ್ತೆ, ವಾರ್ಡ್ 5ರಲ್ಲಿ ವಿದ್ಯಾ ಪ್ರಭೋದಿನಿ ಶಾಲೆಯ ರಸ್ತೆ, ಸರಸ್ವತಿ ಮಂದಿರ ಶಾಲೆಯ ಬಳಿ ರಸ್ತೆ ಮತ್ತು ವಾರ್ಡ್ ಸಂಖ್ಯೆ 6ರಲ್ಲಿ ಜೂನಿಯರ್ ಕಾಲೇಜು ರಸ್ತೆಗಳನ್ನು ಗ್ರಾಪಂ ಅಧ್ಯಕ್ಷೆ ನಾಗರತ್ನ ಕರ್ಕೇರ ಮತ್ತು ಯುಪಿಸಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿದೇಶರ್ಕ ಕಿಶೋರ್ ಆಳ್ವ ಉದ್ಘಾಟಿಸಿದರು.
ತಾಪಂ ಸದಸ್ಯ ಶೇಕಬ್ಬ, ಬಡಾ ಗ್ರಾಪಂ ಉಪಾಧ್ಯಕ್ಷೆ ಇಂದಿರಾ ಶೆಟ್ಟಿ, ಸದಸ್ಯರಾದ ಮುಹಮ್ಮದ್ ರಫೀಕ್, ದೀಪಕ್ ಎರ್ಮಾಳ್, ಮೋಹಿನಿ, ವಸಂತ ದೇವಾಡಿಗ, ಶಕುಂತಲಾ, ಅಬ್ದುಲ್ ರಾಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಶಾಲಿನಿ, ಸ್ಥಳೀಯರಾದ ಸತೀಶ್ ದೇಜಾಡಿ, ಅದಾನಿ ಸಮೂಹದ ಎಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ, ಅದಾನಿ ಫೌಂಡೇಷನ್‌ನ ಸಿಬ್ಬಂದಿ ಗಳಾದ ವಿನೀತ್ ಅಂಚನ್, ಅನುದೀಪ್ ಪೂಜಾರಿ, ಸುಕೇಶ್ ಸುವರ್ಣ, ಶಿವಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







