ದಾವಣಗೆರೆ : ಯುವಕನಿಗೆ ಚಾಕು ಇರಿತ
ದಾವಣಗೆರೆ,ಜೂ.29: ಯುವಕರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಓರ್ವ ಯುವಕನಿಗೆ ಚಾಕು ಇರಿದಿರುವ ಘಟನೆ ಶಾಮನೂರು ಬಳಿಯ ದಾವತ್ ಡಾಬಾ ಮುಂಭಾಗದಲ್ಲಿ ನಡೆದಿದೆ.
ಸೋಮಶೇಖರ್ (30) ಇರಿತಕ್ಕೊಳಗಾದ ಯುವಕ. ಸಿದ್ದವೀರಪ್ಪ ಬಡಾವಣೆಯ ನಿವಾಸಿಯಾದ ಮಂಜುನಾಥ್ ಹಾಗೂ ಸೋಮಶೇಖರ್ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿದೆ. ನಂತರ ವಿಕೋಪಕ್ಕೆ ತಿರುಗಿದ ಪರಿಣಾಮ ಈ ಘಟನೆ ನಡೆದಿದೆ. ಮಂಜುನಾಥ್ ಸೋಮಶೇಖರ್‍ಗೆ ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದ್ದು, ಪ್ರಸ್ತುತ ಎಸ್‍ಎಸ್ ಆಸ್ಪತ್ರೆಗೆ ಗಾಯಾಳು ಸೋಮಶೇಖರ್‍ನನ್ನು ದಾಖಲಿಸಲಾಗಿದೆ.
ಕುಡಿದ ಅಮಲಿನಲ್ಲಿ ಯುವಕರು ಜಗಳವಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story