ಉ.ಪ್ರದೇಶ: ಉಲ್ಕಾಶಿಲೆ ಪತನ?
ಲಕ್ನೊ, ಜೂ.29: ಉತ್ತರಪ್ರದೇಶದ ಕಸೋಲಿ ಗ್ರಾಮದಲ್ಲಿ ಉಲ್ಕಾಶಿಲೆಯಂತಹ ಎರಡು ವಸ್ತುಗಳು ಆಗಸದಿಂದ ಬಿದ್ದಿದ್ದು, ಇವುಗಳ ಬಗ್ಗೆ ಪರಿಶೋಧನೆ ನಡೆಸಲೆಂದು ಸುರಕ್ಷಿತವಾಗಿ ತೆಗೆದಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಕಾಶದಿಂದ ಸಣ್ಣ ಕೆಂಡದ ತುಂಡಿನಂತಹ ಎರಡು ವಸ್ತುಗಳು ಗುರುವಾರ ರಾತ್ರಿ ವೇಳೆ ಕಸೋಲಿ ಗ್ರಾಮದಲ್ಲಿ ಬಿದ್ದಿವೆ. ಮಳೆ ನಿಂತ ಬಳಿಕ ಭಾರೀ ಸದ್ದಿನೊಂದಿಗೆ ಈ ಎರಡು ವಸ್ತುಗಳು ಬಿದ್ದಿದ್ದು ಇವು ಉಲ್ಕಾಶಿಲೆಗಳಾಗಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇವು ಉಲ್ಕಾಶಿಲೆಗಳೇ ಎಂಬುದು ತಜ್ಞರು ಸಂಶೋಧನೆ ನಡೆಸಿದ ಬಳಿಕ ಸ್ಪಷ್ಟವಾಗಲಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕುಮಾರ ಧರ್ಮೇಂದ್ರ ತಿಳಿಸಿದ್ದಾರೆ.
Next Story





