ಬಸ್‌ಗಳ ಮುಖಾಮುಖಿ ಢಿಕ್ಕಿ; ಓರ್ವ ಪ್ರಯಾಣಿಕ ಗಾಯ
ಮಂಗಳೂರು, ಜೂ.29: ಕಿನ್ನಿಗೋಳಿ ಸುರತ್ಕಲ್ ನಡುವಿನ ಕೊಯಿಕುಡೆ ಬಸ್ ನಿಲ್ದಾಣದ ಸಮೀಪ ಎರಡು ಬಸ್‌ಗಳು ಮುಖಾಮುಖಿಯಾಗಿ ಢಿಕ್ಕಿ ಹೊಡೆದು, ಓರ್ವ ಪ್ರಯಾಣಿಕ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಅಪಘಾತದಲ್ಲಿ ಪ್ರಯಾಣಿಕರಾದ ಸವಿತಾ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಖಾಸಗಿ ಬಸ್ ಚಾಲಕ ಸುಂದರ ನಾಯ್ಕ ಎಂಬವರು ಬಸ್‌ನ್ನು ಮಧ್ಯಾಹ್ನ ಸುರತ್ಕಲ್‌ನಿಂದ ಕಿನ್ನಿಗೋಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಕೊಯಿಕುಡೆ ಬಸ್ ನಿಲ್ದಾಣದ ತಲುಪಿ ಪ್ರಯಾಣಿಕರನ್ನು ಇಳಿಸಿ, ಮುಂದಕ್ಕೆ ಬಸ್ ಚಲಾಯಿಸುತ್ತಿದ್ದ ವೇಳೆ ಘಟನೆ ನಡೆದಿದೆ.
ವಿರುದ್ಧ ದಿಕ್ಕಿನಲ್ಲಿ ಕಿನ್ನಿಗೋಳಿ ಕಡೆಯಿಂದ ಸುರತ್ಕಲ್ ಕಡೆಗೆ ಖಾಸಗಿ ಬಸ್‌ನ ಚಾಲಕ ವಿದೇಶ್ ಎಂಬವರು ನಿರ್ಲಕ್ಷತನದಿಂದ ಬಸ್ ಚಲಾಯಿಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಎರಡೂ ಖಾಸಗಿ ಬಸ್‌ಗಳು ಮುಖಾಮುಖಿಯಾಗಿ ಢಿಕ್ಕಿ ಹೊಡೆದಿವೆ. ಪರಿಣಾಮ ಎರಡೂ ಬಸ್‌ಗಳ ಮುಂಭಾಗ ಜಖಂಗೊಂಡಿದೆ. ಢಿಕ್ಕಿ ಪಡಿಸಿದ ಬಸ್‌ನ ಪ್ರಯಾಣಿಕರಾದ ಸವಿತಾ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







