Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಡೆನುಡಿ ಸಿದ್ಧಾಂತ

ನಡೆನುಡಿ ಸಿದ್ಧಾಂತ

ವಾರ್ತಾಭಾರತಿವಾರ್ತಾಭಾರತಿ30 Jun 2018 12:06 AM IST
share
ನಡೆನುಡಿ ಸಿದ್ಧಾಂತ

ಕಂಥೆಯ ಕಟ್ಟಿ, ತಿತ್ತಿಯ ಹೊತ್ತು
ಕಂಥೆಯ ಕಟ್ಟಿ, ತಿತ್ತಿಯ ಹೊತ್ತು,
ಮರಿಯ ನಡಸುತ್ತ, ದೊಡ್ಡೆಯ ಹೊಡೆವುತ್ತ,
ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವ ತಿಟ್ಟುತ್ತ,
ಹಿಂಡನಗಲಿ ಹೋಹ ದಿಂಡೆಯ ಮಣೆಘಟ್ಟನ ಅಭಿಸಂಧಿಯ ಕೋಲಿನಲ್ಲಿಡುತ್ತ,
ಈ ಹಿಂಡಿನೊಳಗೆ ತಿರುಗಾಡುತ್ತಿದ್ದೇನೆ.
ಈ ವಿಕಾರದ ಹಿಂಡ ಬಿಡಿಸಿ,
ನಿಜನಿಳಯ ನಿಮ್ಮಂಗವ ತೋರಿ, ಸುಸಂಗದಲ್ಲಿರಿಸು,
ಎನ್ನೊಡೆಯ ವೀರಬೀರೇಶ್ವರಲಿಂಗಾ.
                                          -ವೀರಗೊಲ್ಲಾಳ

ಬದುಕಿನ ಹೊರೆಯ ಕಟ್ಟಿ, ದೇಹವೆಂಬ ಚರ್ಮದ ಚೀಲವ ಹೊತ್ತು, ಕಿರಿಯಾಸೆಗಳೆಂಬ ಕುರಿಮರಿಗಳನ್ನು ನಡೆಸುತ್ತ, ಹಿರಿಯಾಸೆಗಳೆಂಬ ದೊಡ್ಡಕುರಿಗಳನ್ನು ಹೊಡೆಯುತ್ತ, ಅಡ್ಡದಾರಿ ಹಿಡಿಯುವ ಪ್ರವೃತ್ತಿಗಳೆಂಬ ಹಂಡಬಂಡ ಚುಕ್ಕಿ ಬೊಟ್ಟಿನ ಕಲೆಗಳುಳ್ಳ ಕುರಿಗಳನ್ನು ಬಯ್ಯುತ್ತ, ಸನ್ಮಾರ್ಗದಲ್ಲಿ ಸಾಗುತ್ತಿರುವ ಕುರಿಮಂದೆಯನ್ನು ಬಿಟ್ಟು ಹೋಗುವ ಸೊಕ್ಕೇರಿದ ಟಗರನ್ನು ಸಾಗಬೇಕಾದ ಗುರಿಯ ಕಡೆಗೆ ಸುಜ್ಞಾನದ ಕೋಲಿನಿಂದ ತಿರುಗಿಸುತ್ತ, ಈ ಮನೋವಿಕಾರಗಳೆಂಬ ಕುರಿಗಳ ಹಿಂಡಿನಲ್ಲಿ ಸುತ್ತಾಡುತ್ತಿದ್ದೇನೆ. ಈ ಹಿಂಡನ್ನು ಬಿಡಿಸಿ ನಿಜ ಸ್ಥಾನವಾದ ಎನ್ನೊಳಗಿನ ನಿನ್ನ ಘನವನ್ನು ಎನ್ನ ಅರಿವಿಗೆ ತೋರು; ಶರಣಸಂಕುಲವೆಂಬ ಸುಸಂಗದಲ್ಲಿರಿಸಿ ರಕ್ಷಿಸು ಎಂದು ವೀರಗೊಲ್ಲಾಳ ದೇವರಲ್ಲಿ ಬೇಡಿಕೊಳ್ಳುತ್ತಾನೆ.
 ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಬಸವಣ್ಣನವರ ಸಮಕಾಲೀನನಾದ ಗೊಲ್ಲಾಳೇಶ್ವರನ ಗುಡಿ ಇದೆ. ಈ ವಚನಕಾರ ಜನಪದರ ದೈವವಾಗಿ ಇಂದಿಗೂ ಜನಮನದಲ್ಲಿ ಅಚ್ಚಳಿಯದೇ ಉಳಿದಿದ್ದಾನೆ. ಈತ ವೀರನೂ ಮುಗ್ಧನೂ ಆಗಿದ್ದ. ಕುರಿಕಾಯುವ ಕಾಯಕದ ಈತ ಕುರಿಯ ಹಿಕ್ಕೆಯನ್ನೇ ಲಿಂಗವೆಂದು ಪೂಜಿಸಿ ಆತ್ಮಜ್ಞಾನವನ್ನು ಸಂಪಾದಿಸಿದ. ಈತನ ವಚನಗಳು ಬೆಡಗಿನ ಶೈಲಿಯಿಂದ ಕೂಡಿವೆ. ವೃತ್ತಿಪರಿಭಾಷೆಯನ್ನು ಮತ್ತು ತತ್ತ್ವಪರಿಭಾಷೆಯನ್ನು ಒಂದೇ ವಚನದಲ್ಲಿ ಬಳಸುತ್ತ ಲೌಕಿಕವನ್ನು ಮತ್ತು ಅಧ್ಯಾತ್ಮವನ್ನು ಏಕಕಾಲಕ್ಕೆ ಹೇಳುವ ಕ್ರಮ ಓದುಗರ ಮನಸ್ಸಿನ ಮೆೀಲೆ ಆಳವಾದ ಪರಿಣಾಮ ಬೀರುತ್ತದೆ
ಮೇಲಿನ ವಚನದಲ್ಲಿ ವೀರಗೊಲ್ಲಾಳ, ಕುರಿ ಕಾಯುವ ಕಾಯಕದಿಂದ ಬಂದ ಅನುಭವದ ಮೂಲಕ ಅನುಭಾವದ ಜಗತ್ತನ್ನು ಕಂಡುಕೊಳ್ಳುತ್ತಾನೆ. ಕ್ರಿಯೆಯಿಂದ ಜ್ಞಾನೋದಯವಾಗುತ್ತದೆ. ಜ್ಞಾನದಿಂದ ಕ್ರಿಯಾಶೀಲರಾಗುತ್ತೇವೆ. ಕ್ರಿಯೆ ಇಲ್ಲದ ಜ್ಞಾನ ನಿರುಪಯುಕ್ತ. ಜ್ಞಾನವಿಲ್ಲದ ಕ್ರಿಯೆ ಗಂಡಾಂತರಕಾರಿ. ಕಾಯಕದ ಅನುಭವವೇ ಜ್ಞಾನಕ್ಕೆ ಆಧಾರ. ವಿಶ್ವಜ್ಞಾನವು ವಿಶ್ವದ ಎಲ್ಲ ಕಾಯಕಜೀವಿಗಳ ಅನುಭವದಿಂದಲೇ ಸಿದ್ಧವಾಗಿರುತ್ತದೆ. ಆ ಎಲ್ಲ ಅನುಭವಗಳ ಒಟ್ಟು ಸಾರವೇ ಅನುಭಾವವಾಗಿರುತ್ತದೆ. ಈ ಅನುಭಾವ ಸಾರ್ವಕಾಲಿಕವಾಗಿರುತ್ತದೆ. ಇಂಥ ಅನುಭಾವವನ್ನು ಶರಣರು ದೈನಂದಿನ ಬದುಕಿನಿಂದಲೇ ಪಡೆದು ಜಗತ್ತಿಗೇ ಮಾರ್ಗದರ್ಶಿಯಾದರು. ವೀರಗೊಲ್ಲಾಳ ತನ್ನ ಒಳಹೊರಗಿನ ಕುರಿಗಳನ್ನು ಹಿಡಿತದಲ್ಲಿಟ್ಟುಕೊಂಡ ಹಾಗೆ ಮಾನವ ಅಷ್ಟಮದ, ಸಪ್ತವ್ಯಸನ, ಅರಿಷಡ್ವರ್ಗ, ಕರಣಚತುಷ್ಟಯ ಮುಂತಾದ ಪ್ರವೃತ್ತಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಕಲೆಯನ್ನು ಕಲಿಯಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X