ಬಜೆಟ್ ಅಧಿವೇಶನ 15 ದಿನಗಳಿಗೆ ವಿಸ್ತರಿಸಿ: ಆಯನೂರು ಆಗ್ರಹ
ಉಡುಪಿ, ಜೂ.30: ಈ ಬಾರಿಯ ಬಜೆಟ್ ಅಧಿವೇಶನವನ್ನು ಜು.2 ರಂದು ಕರೆಯಲಾಗಿದ್ದು, ಕೇವಲ 10 ದಿನಗಳ ಅಧಿವೇಶನದಲ್ಲಿ ಚರ್ಚೆಗೆ ಅವ ಕಾಶ ಸಿಗುವುದು ಕಷ್ಟಸಾಧ್ಯವಾಗಿದೆ. ಆದುದರಿಂದ ಈ ಅಲ್ಪಾವಧಿಯ ಅಧಿ ವೇಶನವನ್ನು 15 ದಿನಗಳಿಗೆ ವಿಸ್ತರಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಆಯ ನೂರು ಮಂಜುನಾಥ್ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈ ಬಾರಿಯ ಬಜೆಟ್ ಅಧಿವೇಶನವನ್ನು ಜು.2ರಂದು ಕರೆಯಲಾಗಿದ್ದು, ಇದರ ಮಾಹಿತಿ ಕೆಲವು ದಿನಗಳ ಹಿಂದೆಯಷ್ಟೆ ಸದಸ್ಯರು ಗಳಿಗೆ ದೊರೆತಿದೆ. ಇದರಿಂದ ಪ್ರಶ್ನೆಗಳನ್ನು ಕಳುಹಿಸಲು ಕಾಲಾವಕಾಶವೇ ಇಲ್ಲ ವಾಗಿದ್ದು, ಇದರಿಂದ ಚರ್ಚೆ ಹಾಗೂ ಪ್ರಶ್ನೋತ್ತರಗಳಿಗೆ ಅವಕಾಶ ಸಿಗುವುದಿಲ್ಲ ಎಂದರು.
ಈ ಹಿಂದೆ ರೈತರ ಸಾಲಮನ್ನಾ ವಿಚಾರದಲ್ಲಿ ಕಮಿಷನ್ ಪಡೆದುಕೊಂಡವರು ಯಾರು ಎಂಬುದು ನನಗೆ ತಿಳಿದಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದು, ಈ ರೀತಿ ಕಮಿಷನ್ ಪಡೆದುಕೊಂಡಿದ್ದರೆ ಅದು ರಾಜ್ಯದ ಬಡ ರೈತರಿಗೆ ಮಾಡಿದ ದ್ರೋಹ ಆಗಿದೆ. ಆದುದರಿಂದ ಮುಖ್ಯಮಂತ್ರಿಗಳು ಅದು ಯಾರು ಎಂಬದನ್ನು ಅಧಿವೇಶನದಲ್ಲಿ ಬಹಿರಂಗ ಪಡಿಸಬೆೀಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಮಾಡಿರುವ ಶೈಕ್ಷಣಿಕ ಸಾಲದ ಬಡ್ಡಿಯನ್ನು ಸರಕಾರ ಮನ್ನಾ ಮಾಡಬೇಕು. ಸಾಲ ಮಾಡಿರುವ ವಿದ್ಯಾ ವಂತರು ಕೆಲಸ ಸಿಗದೆ ಬ್ಯಾಂಕ್ ನೋಟೀಸ್‌ಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡ ರಾದ ಕುತ್ಯಾರು ನವೀನ್ ಶೆಟ್ಟಿ, ಶ್ಯಾಮಲಾ ಕುಂದರ್, ಸಂಧ್ಯಾ ರಮೇಶ್, ಜಗದೀಶ್ ಆಚಾರ್ಯ, ಮನೋಹರ್ ಕಲ್ಮಾಡಿ ಉಪಸ್ಥಿತರಿದ್ದರು.







