ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ
ಕಾರ್ಕಳ, ಜೂ.30: ಬಂಗ್ಲೆಗುಡ್ಡೆಯ ಸೈಯದ್ ಇಕ್ಬಾಲ್ ಎಂಬವರ ಮಗಳು ಸಮೀರಾ ಬಾನು(19) ಎಂಬಾಕೆ ಜೂ. 23ರಂದು ಸಂಜೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೊರ ಹೋದವಳು ಈವರೆಗೆ ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಹಾಲಾಡಿ ಸರಕಾರಿ ಪೂರ್ವ ಕಾಲೇಜಿಗೆ ಬಸ್ಸಿನಲ್ಲಿ ಜೂ.29 ರಂದು ಬೆಳಗ್ಗೆ ಹೊರಟ ಹಾವಂಜೆಯ ಮಾಲತಿ ಹೊಳ್ಳ ಎಂಬವರ ಪುತ್ರ ಕಮಲೇಶ ಹೊಳ್ಳ (19) ಎಂಬಾತ ಕಾಲೇಜಿಗೂ ಹೋಗದೆ ಈವರೆಗೆ ಮನೆಗೂ ಬಾರದೇ ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





