ಅಬುಧಾಬಿಯಲ್ಲಿ ರಶೀದ್ ಮಲಬಾರಿ ಬಂಧನ ?

ಮಂಗಳೂರು, ಜೂ.30: ಕಳೆದ ಕೆಲವು ವರ್ಷಗಳ ಹಿಂದೆ ಜೈಲಿನಿಂದ ಬಿಡುಗಡೆಯಾದ ಬಳಿಕ ನಾಪತೆಯಾಗಿದ್ದ ಕುಖ್ಯಾತ ಶಾಪ್ ಶೂಟರ್ ರಶೀದ್ ಮಲಬಾರಿಯನ್ನು ಅಬುಧಾಬಿಯಲ್ಲಿ ಬಂಧಿಸಲಾಗಿದೆ ಎನ್ನುವ ವದಂತಿ ಈಗ ಎಲ್ಲೆಡೆ ಹರಡುತ್ತಿದೆ.
2014ರ ಜುಲೈಯಲ್ಲಿ ಬೆಂಗಳೂರಿನ ಜೈಲಿನಿಂದ ರಶೀದ್ ಮಲಬಾರಿಗೆ ಜಾಮೀನು ಲಭಿಸಿ, ಬಿಡುಗಡೆ ಹೊಂದಿದ್ದ. ಬಳಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದ. ಆತನಿಗಾಗಿ ಹಲವೆಡೆ ಮಂಗಳೂರು ಪೊಲೀಸರು ಹುಡುಕಾಟ ನಡೆಸಿ ಲುಕ್‌ಔಟ್ ನೋಟಿಸ್ ಹಾಗೂ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದರು.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ನಗರ ಪೊಲೀಸ್ ಕಮಿಶನರ್ ಟಿ.ಆರ್. ಸುರೇಶ್, ಅಬುಧಾಬಿಯಲ್ಲಿ ಬಂಧನಕ್ಕೊಳಗಾಗಿದ್ದಾನೆ ಎನ್ನಲಾದ ರಶೀದ್ ಮಲಬಾರಿ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಬಂಧನದ ಬಗ್ಗೆ ಯಾರೂ ದೃಢಪಡಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
Next Story





