ಮಡಿಕೇರಿ: ಶಾಸಕ ಅಪ್ಪಚ್ಚು ರಂಜನ್‍ಗೆ ಮಠಾಧಿಪತಿಗಳಿಂದ ಅಭಿನಂದನೆ
ಮಡಿಕೇರಿ, ಜೂ.30: ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಪುನರಾಯ್ಕೆಯಾದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರನ್ನು ಬಸವ ಪಟ್ಟಣದ ತೋಟಂದಾರ್ಯ ಮಠದ ಪೀಠಾಧ್ಯಕ್ಷರಾದ ಶ್ರೀಸ್ವತಂತ್ರ ಬಸವ ಲಿಂಗ ಸ್ವಾಮೀಜಿ ಅಭಿನಂದಿಸಿದರು.
5ನೇ ಭಾರಿಗೆ ಆಯ್ಕೆಯಾದ ಎಂ.ಪಿ.ಅಪ್ಪಚ್ಚು ರಂಜನ್‍ರವರನ್ನು ಅವರ ಗೃಹ ಕಛೇರಿಯಲ್ಲಿ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿಗಳೊಡನೆ ಭೇಟಿ ಮಾಡಿದ ಶ್ರೀಗಳು ಕೆಲವು ಹೊತ್ತು ಸಮಾಲೋಚನೆ ನಡೆಸಿದರು.
ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಅವರು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಅಭಿವೃದ್ದಿ ಕಾರ್ಯ ಕೈಗೊಳ್ಳುವಂತೆ ಮಾರ್ಗದರ್ಶ ನೀಡಿದರು. ಈ ಸಂದರ್ಭ ಸೋಮವಾರಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹದೇವಪ್ಪ, ಕುಶಾಲನಗರ ಐ.ಟಿ.ಐ ನ ನಿವೃತ್ತ ಪ್ರಾಂಶುಪಾಲರಾದ ಶಿವಪ್ಪ, ಪ್ರಮುಖರಾದ ಸಾಂಭಶಿವ ಮೂರ್ತಿ, ಮಹದೇವಪ್ಪ, ಅರ್ಚಕ ಬಸವ ಕುಮಾರ ಶಾಸ್ತ್ರೀ ಮತ್ತಿತರರು ಹಾಜರಿದ್ದರು.
Next Story