ಸರ್ಜಿಕಲ್ ಗ್ಲೌಸ್ ಖರೀದಿಯಲ್ಲಿ ಭ್ರಷ್ಟಾಚಾರ: ಆರೋಪ
ಮಂಗಳೂರು, ಜೂ.30: ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಈ ಹಿಂದೆ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿದ್ದ ಡಾ.ಸರೋಜಾ, ಪ್ರಥಮ ದರ್ಜೆ ಸಹಾಯಕಿಯರಾದ ಬಿ.ಜಿ. ಯಶೋದಾ, ಕೆ.ಬಿ. ಸುಮಾ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ 2011ರಿಂದ 2013ರವರೆಗಿನ ಸರ್ಜಿಕಲ್ ಗ್ಲೌಸ್ ಖರೀದಿಯಲ್ಲಿ 10,86,780 ರೂ., ಲಿನನ್ ಬಟ್ಟೆಗಾಗಿ 45,500 ರೂ. ಹಾಗೂ ಬೆಡ್ಡಿಂಗ್ ಸಾಮಗ್ರಿ ಖರೀದಿಯಲ್ಲಿ 10 ಸಾವಿರ ರೂ. ಸೇರಿ ಒಟ್ಟು 11,42,280 ರೂ. ಭ್ರಷ್ಟಾಚಾರ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಭ್ರಷ್ಟಾಚಾರ ನಿಗ್ರಹ ದಳದ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಅಧೀಕ್ಷಕಿ ಶ್ರುತಿ ಎನ್.ಎಸ್. ಮಾರ್ಗದರ್ಶನದೊಂದಿಗೆ ಭ್ರಷ್ಟಾಚಾರ ನಿಗ್ರಹ ದಳದ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಸುಧೀರ್ ಎಂ. ಹೆಗಡೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.
Next Story





