ಉ. ಕೊರಿಯದಿಂದ ಪರಮಾಣು ಇಂಧನ ಉತ್ಪಾದನೆ ಹೆಚ್ಚಳ
ಅಮೆರಿಕ ಗುಪ್ತಚರ ಸಂಸ್ಥೆಗಳ ಶಂಕೆ
ವಾಶಿಂಗ್ಟನ್, ಜೂ. 30: ಉತ್ತರ ಕೊರಿಯವು ಇತ್ತೀಚಿನ ತಿಂಗಳುಗಳಲ್ಲಿ ಹಲವು ರಹಸ್ಯ ಸ್ಥಳಗಳಲ್ಲಿ ಪರಮಾಣು ಅಸ್ತ್ರಗಳಲ್ಲಿ ಬಳಸುವ ಇಂಧನದ ಉತ್ಪಾದನೆಯನ್ನು ಹೆಚ್ಚಿಸಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಭಾವಿಸಿವೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.
ಅಮೆರಿಕದೊಂದಿಗೆ ನಡೆಯುವ ಪರಮಾಣು ಮಾತುಕತೆಗಳ ವೇಳೆ, ಅಮೆರಿಕದಿಂದ ರಿಯಾಯಿತಿಗಳನ್ನು ಪಡೆಯುವ ವೇಳೆ ಉತ್ತರ ಕೊರಿಯವು ಈ ಇಂಧನಗಳನ್ನು ಅಡಗಿಸಿಡಬಹುದಾಗಿದೆ ಎಂಬ ಅನುಮಾನವನ್ನು ಗುಪ್ತಚರ ಸಂಸ್ಥೆಗಳು ವ್ಯಕ್ತಪಡಿಸಿವೆ.
ಇತ್ತೀಚಿನ ತಿಂಗಳುಗಳಲ್ಲಿ ಉತ್ತರ ಕೊರಿಯವು ಪರಮಾಣು ಅಸ್ತ್ರಗಳಲ್ಲಿ ಬಳಸುವ ಸಂವರ್ಧಿತ ಯುರೇನಿಯಂ ಉತ್ಪಾದನೆಯನ್ನು ಹೆಚ್ಚಿಸಿದೆ ಎಂದು ಅಮೆರಿಕದ ಐವರು ಅಧಿಕಾರಿಗಳನ್ನು ಉಲ್ಲೇಖಿಸಿ ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.
Next Story





