ಅರ್ಜೇಂಟೀನ ಮನೆಗೆ ಫ್ರಾನ್ಸ್ ಕ್ವಾರ್ಟರ್‌ಗೆ
ಕೈಲ್ಯಾನ್ ಬಾಪೆ ದಾಖಲಿಸಿದ ಅವಳಿ ಗೋಲುಗಳ ನೆರವಿನಿಂದ ಫ್ರಾನ್ಸ್ ತಂಡ ಕಝಾನ್ ಅರೇನಾದಲ್ಲಿ ಶನಿವಾರ ನಡೆದ ವಿಶ್ವಕಪ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನವನ್ನು 4-3 ಗೋಲುಗಳ ಅಂತರದಲ್ಲಿ ಬಗ್ಗು ಬಡಿದು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಫ್ರಾನ್ಸ್ ತಂಡದ ಆ್ಯಂಟನಿ ಗ್ರಿಝ್ಮನ್(13ನೇ ನಿ.), ಬೆಂಜಮಿನ್ ಪವಾದ್ (57ನೇ ನಿ.) , ಕೈಲ್ಯಾನ್ ಬಾಪೆ(64ನೇ, 68ನೇ ನಿ.) ಗೋಲು ದಾಖಲಿಸಿದರು. ಅರ್ಜೆಂಟೀನ ತಂಡದ ಆ್ಯಂಜೆಲೊ ಡಿ ಮಾರಿಯಾ (41ನೇ ನಿ.) , ಗೇಬ್ರಿಯಲ್ ಮಕಾರ್ಡೊ (48ನೇ ನಿ) ಮತ್ತು ಸೆರ್ಗುಯೊ ಅಗ್ಯುರೊ (90+3 ನಿ) ಗೋಲು ದಾಖಲಿಸಿದರು.
Next Story





