Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಮುಂದಿನ ಚುನಾವಣೆಯಲ್ಲಿ ಮೋದಿಯಿಂದ ಯೋಗಾಸನ...

ಮುಂದಿನ ಚುನಾವಣೆಯಲ್ಲಿ ಮೋದಿಯಿಂದ ಯೋಗಾಸನ ಬಳಕೆ!

-ಚೇಳಯ್ಯ chelayya@gmail.com-ಚೇಳಯ್ಯ chelayya@gmail.com1 July 2018 12:04 AM IST
share
ಮುಂದಿನ ಚುನಾವಣೆಯಲ್ಲಿ ಮೋದಿಯಿಂದ ಯೋಗಾಸನ ಬಳಕೆ!

ನರೇಂದ್ರ ಮೋದಿಯವರು ಯೋಗ ದಿನದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರ ತುರ್ತು ಸಭೆ ಕರೆದಿದ್ದರು. ಮುಂದಿನ ಚುನಾವಣೆಗಳನ್ನು ಯೋಗದ ಮೂಲಕ ಗೆಲ್ಲಲು ನರೇಂದ್ರ ಮೋದಿ ಯವರು ಅದಾಗಲೇ ತೀರ್ಮಾನಿಸಿದ್ದರು ಮತ್ತು 2019ರ ಚುನಾ ವಣೆಗೆ ಬಿಜೆಪಿಯ ನಾಯಕರನ್ನು ಸಿದ್ಧಗೊಳಿಸಲು ಅವರಿಗೆ ವಿವಿಧ ಯೋಗಾಸನಗಳನ್ನು ಕಲಿಸಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಬಿಜೆಪಿಗರನ್ನು ಒಟ್ಟು ಸೇರಿಸಿ ಭಾಷಣ ಶುರು ಹಚ್ಚಿದರು.
‘‘ಬಾಯಿಂಯೋಂ ಔರ್ ಬೆಹೆನೋ....’’ ಎಂದದ್ದೇ ಭಕ್ತರು ಮೈಮೇಲೆ ದೆವ್ವ ಹೊಕ್ಕವರಂತೆ ‘ಮೋದಿ...ಮೋದಿ...ಮೋದಿ...’’ ಎಂದು ಚೀರತೊಡಗಿದರು.
‘‘ಮುಂದಿನ ಚುನಾವಣೆಯನ್ನು ಗೆಲ್ಲುವುದಕ್ಕೆ ನಾವು ಯೋಗವನ್ನು ಸಮರ್ಥವಾಗಿ ಬಳಸಿ ಕೊಳ್ಳಬೇಕಾಗಿದೆ. ಈಗಾಗಿ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ವಿವಿಧ ಭಂಗಿಗಳನ್ನು ಈಗಲೇ ಕಲಿಯಬೇಕು....’’
‘‘ಮೋದೀಜಿ ನಾವು ಈ ಯೋಗ ವನ್ನು ಚುನಾವಣೆಯಲ್ಲಿ ಹೇಗೆ ಬಳಸು ವುದು....?’’ ಯಾರೋ ಕೇಳಿದರು.

‘‘ನೋಡಿ...ನಮ್ಮ ವಿರೋಧಿಗಳು ನಮ್ಮ ಬಗ್ಗೆ ತುಂಬಾ ಅಪಪ್ರಚಾರ ಮಾಡಿದ್ದಾರೆ. ದೇಶದ ಜನರಲ್ಲಿ ನಿರಾಶವಾದ ಬಿತ್ತಿದ್ದಾರೆ. ಆದುದರಿಂದ ಈ ಬಾರಿ ನಾವು ಚುನಾವಣೆಯಲ್ಲಿ ಮತ ಯಾಚಿಸುವಾಗ ಬಹಳ ಜಾಗ್ರತೆ ವಹಿಸುವ ಅಗತ್ಯವಿದೆ. ಯೋಗದಿಂದ ಏನನ್ನೂ ಸಾಧಿಸಲು ಸಾಧ್ಯವಿದೆ ಎನ್ನುವುದನ್ನು ನಾವು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ. ಅದನ್ನು ವಿಶ್ವವೇ ಒಪ್ಪಿಕೊಂಡಿದೆ. ಇದೀಗ ಯೋಗದ ಮೂಲಕ ಚುನಾವಣೆಯನ್ನು ಗೆಲ್ಲಿಸುವುದರಿಂದ ವಿಶ್ವದಾದ್ಯಂತ ಯೋಗದ ಜನಪ್ರಿಯತೆಯನ್ನು ಹೆಚ್ಚಿಸಬೇಕಾಗಿದೆ. ನಾನು ಚುನಾವಣೆಯಲ್ಲಿ ಪ್ರಯೋಗ ಮಾಡಬಹುದಾದ ಕೆಲವು ಆಸನಗಳನ್ನು ಪರಿಚಯಿಸುತ್ತಿದ್ದೇನೆ....’’

***

ನರೇಂದ್ರ ಮೋದಿಯವರು ಪರಿಚಯಿಸಿರುವ ವಿವಿಧ ಆಸನಗಳು ಇಲ್ಲಿವೆ.
ನೆಹರು ಬಂಧಾಸನ:

 ಇದು ಚುನಾವಣೆಯ ಸಂದರ್ಭದಲ್ಲಿ ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿ ಬಳಸಬಹುದಾದ ಆಸನ. ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಹೆಚ್ಚಳಕ್ಕೆ, ನಮ್ಮ ಸೈನಿಕರ ಸಾವಿನ ಹೆಚ್ಚಳದ ಸಮಸ್ಯೆಗಳಿಗೆ ಈ ಆಸನ ದಿಂದ ಪರಿಹಾರವಿದೆ. ಈ ಆಸನ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಮಹತ್ವದ ಮತ್ತು ಅತ್ಯಂತ ಸುಲಭದ ಭಂಗಿಯಾಗಿದೆ. ಭಾರತದ ಅತ್ಯಂತ ಪುರಾತನ ಆಸನ ಇದಾಗಿದ್ದು, ಭಾರತದಲ್ಲಿರುವ ಬಹುತೇಕ ಸಮಸ್ಯೆಗಳಿಗೆ ಈ ಆಸನಗಳನ್ನು ಪದೇ ಪದೇ ಬಳಸುತ್ತಾ ಇರಬೇಕು. ತಳಮಟ್ಟದ ಕಾರ್ಯಕರ್ತರಿಗೆ ಈ ಆಸನವನ್ನು ಹೆಚ್ಚು ಹೆಚ್ಚು ವಿವರಿಸಿಕೊಡಬೇಕು.
ವಿಶ್ವಗುರ್ರಾಸನ:
 ಇದು ಸ್ವಲ್ಪ ಕಷ್ಟಕರವಾದ ಆಸನ. ಆದರೆ ಪದೇ ಪದೇ ಇದನ್ನು ಅಭ್ಯಾಸ ಮಾಡಿದರೆ ನಿಧಾನಕ್ಕೆ ಅದು ತನ್ನ ಪರಿಣಾಮವನ್ನು ಬೀರು ತ್ತದೆ. ಈ ಆಸನವನ್ನು ಪ್ರಯೋಗಿಸಿದಾಕ್ಷಣ ಉಳಿದ ಹತ್ತು ಹಲವು ಸಮಸ್ಯೆಗಳು ವೈರಸ್ ರೂಪದಲ್ಲಿ ಬಂದು ನಿಲ್ಲುತ್ತವೆಯಾದರೂ, ಇಂತಹ ಸಂದರ್ಭದಲ್ಲಿ ಉಪ ಆಸನಗಳಾಗಿರುವ ಬುಲೆಟ್ ಟ್ರೈನಾಸನ, ಪ್ರಾಚೀನಾ ವಿಜ್ಞಾನಾಸನಗಳನ್ನು ಬಳಸಬೇಕು. ಇಂತಹ ಆಸನಗಳನ್ನು ಮಾಡುವಾಗ ಒಬ್ಬೊಬ್ಬರೇ ಮಾಡದೇ ಜೊತೆಗೂಡಿ ಮಾಡಬೇಕು. ಸಾಧ್ಯವಾದರೆ ಇಂತಹ ಆಸನಗಳನ್ನು ಈಗಾಗಲೇ ಬಿತ್ತರಿಸುತ್ತಿರುವ ಮಾಧ್ಯಮಗಳ ಸಹಾಯಗಳನ್ನು ಪಡೆದುಕೊಳ್ಳಬೇಕು. ನೋಟು ನಿಷೇಧ, ಜಿಎಸ್‌ಟಿ ಮೊದಲಾದ ಸಮಸ್ಯೆಗಳನ್ನು ಎದುರಿಸಲು ಇದು ತುಂಬಾ ಪ್ರಯೋಜನಕಾರಿ. ಅನುಭವವಿಲ್ಲದವರು ಇದನ್ನು ಮಾಡಲು ಹೊರಟರೆ ಕೈಕಾಲು ಉಳುಕುವ ಸಾಧ್ಯತೆ ಗಳಿವೆ. ಅನುಭವಿಗಳಷ್ಟೇ ಇದನ್ನು ಮಾಡಿ. ಸಂದರ್ಭ ಬಂದಾಗ, ಅಂಬಾನಿ, ಅದಾನಿಗಳ ಸಹಾಯ ಪಡೆಯಿರಿ.
ಅಯ್ಯೋಧ್ಯಾಸನ:

ಸಾಧಾರಣವಾಗಿ ಎಲ್ಲ ಚುನಾವಣೆಯ ಸಂದರ್ಭದಲ್ಲೂ ನಾವು ಸುಲಭವಾಗಿ ಬಳಸಿರುವ ಆಸನ ಇದಾಗಿದೆ. ಆದರೆ ಇದನ್ನು ಯರ್ರಾಬಿರ್ರಿಯಾಗಿ ಬಳಸುವುದರಿಂದ ಕೆಲವೊಂದು ದುಷ್ಪರಿಣಾಮ ಗಳೂ ಇವೆ. ಯಾವ ಯಾವ ಜಾಗದಲ್ಲಿ ಈ ಆಸನ ಪ್ರಯೋಜನಕ್ಕೆ ಬರುತ್ತದೆಯೋ ಆ ಜಾಗದಲ್ಲಿ ಇವುಗಳನ್ನು ಬಳಸಬೇಕು. ನೋಟು ನಿಷೇಧ, ಜಿಎಸ್‌ಟಿಯಂತಹ ಸಮಸ್ಯೆಗಳು ತೀವ್ರವಾಗಿ ಎದುರಾದಾಗ ಇಂತಹ ಆಸನಗಳನ್ನು ಪದೇ ಪದೇ ಮಾಡಬೇಕು. ಈ ಆಸನಗಳ ಜೊತೆಗೆ ಉಪ ಆಸನಗಳಾಗಿ ಉದ್ವಿಗ್ನಾಸನಗಳನ್ನು ಬಳಸಬೇಕು. ಉದ್ವಿಗ್ನಾಸನದಿಂದ ಹಲವು ಸಮಸ್ಯೆಗಳು ಜನರಿಂದ ಮರೆಯಾಗುವಂತೆ ಮಾಡಬಹುದಾಗಿದೆ. ಉದಾಹರಣೆಗೆ ತಲೆನೋವು ಇದೆಯೆಂದು ತೆಗೆದುಕೊಳ್ಳೋಣ. ಆಗ ಅದಕ್ಕಿಂತ ದೊಡ್ಡ ನೋವಾಗಿರುವ ಹಲ್ಲುನೋವನ್ನು ಕೊಟ್ಟರೆ ತಲೆನೋವಿನ ಬದಲಿಗೆ ಹಲ್ಲು ನೋವಿನ ಕುರಿತಂತೆ ಚಿಂತಿಸುತ್ತಾರೆ. ಅಂತೆಯೇ ಉದ್ವಿಗ್ನಾಸನದ ತಂತ್ರದ ಮೂಲಕ ಬೇರೆ ಬೇರೆ ಸಣ್ಣ ಸಮಸ್ಯೆಗಳಿಂದ ನಾವು ಪಾರಾಗಬಹುದು. ಆದರೆ ಅತಿಯಾಗಿ ಮಾಡುವುದರಿಂದ ಆರೋಗ್ಯ ಏರು ಪೇರು ಆಗುವ ಸಮಸ್ಯೆಗಳು ಇವೆ. ಸರ್ಜಿಕಲ್ ಸ್ಟ್ರೈಕಾಸನ:
 ಪಾಕಿಸ್ತಾನದ ಉಗ್ರರು, ಮತ್ತು ಸೈನಿಕರ ಸಮಸ್ಯೆಗಳು ಎದುರಾ ದಾಗ ಈ ಆಸನವನ್ನು ಬಳಸಬೇಕು. ಇದರ ವೀಡಿಯೊ ಚಿತ್ರೀಕರಣ ವೂ ಇರುವುದರಿಂದ ಈ ಆಸನವನ್ನು ಚುನಾವಣೆಯಲ್ಲಿ ಬಳಸು ವುದರಿಂದ ಪರಿಣಾಮಕಾರಿ ಲಾಭಗಳನ್ನು ಪಡೆಯಬಹುದು. ವಿಶೇಷ ತರಬೇತಿ ಪಡೆದ ಯೋಗ ಪಟುಗಳನ್ನು ಬಳಸಿ ಈ ವೀಡಿಯೊವನ್ನು ತಯಾರಿಸಿರುವುದರಿಂದ ಈ ವೀಡಿಯೊ ಜೊತೆ ಜೊತೆಗೇ ಆಸನವನ್ನು ಮಾಡಿದರೆ ಲಾಭವಿದೆ. ಕಾಶ್ಮೀರದ ಎಲ್ಲ ಸಮಸ್ಯೆಗಳಿಗೂ ಈ ಆಸನ ಪ್ರಯೋಜನಕಾರಿ. ವಿಶ್ವಗುರ್ರಾಸನ ಮತ್ತು ಸರ್ಜಿಕಲ್ ಸ್ಟ್ರೈಕಾಸನಕ್ಕೆ ಪರಸ್ಪರ ಸಂಬಂಧವಿರುವುದರಿಂದ ಜೊತೆ ಜೊತೆಯಾಗಿ ಪದೇ ದೇ ಮಾಡುವುದರಿಂದಲೂ ಲಾಭವಿದೆ.
ಮೋದಿ ಹತ್ಯಾ ಸಂಚಾಸನ:
ಇದು ತುಸು ಗಂಭೀರವಾಗಿರುವ ಆಸನವಾಗಿದೆ. ನೇರವಾಗಿ ಮೋದಿ ಜಪದ ಜೊತೆಗೆ ಮಾಡುವಂತಹ ಆಸನ ಇದಾಗಿದೆ. ಈ ಆಸನಗಳಿಗೆ ಮಾಧ್ಯಮಗಳ ಸಹಾಯವನ್ನು ಮಾತ್ರವಲ್ಲದೆ ಕೆಲವು ಗುಪ್ತಚರ ಸಂಸ್ಥೆಗಳ ನೆರವುಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳ ತಕ್ಕದ್ದು. ನಾವು ದೈನಂದಿನ ದಿನಚರಿಯಲ್ಲಿ ಮಾಡುವಂತಹ ‘ಸುಳ್ಳಾಸನ’ದ ಅಂತಿಮ ಹಂತ ಇದು. ಭಾವನಾತ್ಮಕವಾಗಿ ಪರಿಣಾಮಗಳನ್ನು ಬೀರಬಲ್ಲ ಆಸನ ಮತ್ತು ಬಿಜೆಪಿಯ ಪಾಲಿಗೆ ಇದು ಅನಿವಾರ್ಯಾಸನ ಕೂಡ. ಈಗಾಗಲೇ ಈ ಆಸನಗಳನ್ನು ಪ್ರಚಾರ ವಾಡಲು ಜನರನ್ನು ನೇಮಿಸಲಾಗಿದೆ.
ಶವಾಸನ:
ಇದು ಕಟ್ಟ ಕಡೆಯ ಆಸನ. ಅಯ್ಯೋಧ್ಯಾಸನ ಮತ್ತು ಉದ್ವಿಗ್ನಾಸನ ದ ಅನಂತರ ನಾವು ಮಾಡಬಹುದಾದ ಆಸನ. ಮೊದಲ ಎರಡು ಆಸನಗಳ ಬಳಿಕ ಈ ಆಸನವನ್ನು ಮಾಡುವುದರಿಂದ ಹೆಚ್ಚು ಲಾಭವಿದೆ. ಶವಗಳನ್ನು ಮುಂದಿಟ್ಟು ಮಾಡುವ ಆಸನಗಳಾಗಿವೆ. ಕರಾವಳಿಯಲ್ಲಿ ಈ ಬಾರಿ ಈ ಆಸನದ ಫಲಾಫಲಗಳ ಕುರಿತಂತೆ ಸಣ್ಣದೊಂದು ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ. ದೇಶಾದ್ಯಂತ ಶವಗಳನ್ನು ಬಳಸಿಕೊಳ್ಳುವುದರಿಂದ ಎಲ್ಲ ಸಮಸ್ಯೆಗಳೂ ಬದಿಗೆ ಸರಿದು ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯ. ಆದುದರಿಂದ ಶವಾಸನಕ್ಕೆ ಬೇಕಾದ ಸಿದ್ಧತೆಗಳನ್ನೂ ಈಗಲೇ ಮಾಡಿಟ್ಟುಕೊಳ್ಳಬೇಕಾಗಿದೆ. ಲವ್‌ಜಿಹಾದಾಸನ, ಗೋಹತ್ಯಾ ಸನವನ್ನು ಜೊತೆಜೊತೆಯಾಗಿ ಮಾಡುವುದರಿಂದ ಹೆಚ್ಚು ಹೆಚ್ಚು ಪ್ರಯೋಜನಗಳು ದೊರಕುತ್ತದೆ.

share
-ಚೇಳಯ್ಯ chelayya@gmail.com
-ಚೇಳಯ್ಯ chelayya@gmail.com
Next Story
X