ಬಿಎಸ್‌ವೈ ‘ಅದೃಷ್ಟ’ದ ಬಂಗಲೆ ಸಚಿವ ಸಾ.ರಾ.ಮಹೇಶ್‌ಗೆ ಹಂಚಿಕೆ

ಬೆಂಗಳೂರು, ಜು. 1: ವಿಧಾನಸಭೆ ವಿಪಕ್ಷ ನಾಯಕ ಬಿಎಸ್.ಯಡಿಯೂರಪ್ಪ ಅವರು ಕೇಳಿದ್ದ, ತಮ್ಮ ಅದೃಷ್ಟದ ಬಂಗಲೆ ಎನ್ನಲಾದ ‘ರೇಸ್‌ವ್ಯೆ ಕಾಟೇಜ್’ ಕೊನೆಗೂ ಕೈತಪ್ಪಿದೆ.
ಇಲ್ಲಿನ ರೇಸ್‌ಕೋರ್ಸ್ ರಸ್ತೆಯಲ್ಲಿನ ರೇಸ್‌ವ್ಯೆ ಕಾಟೇಜ್‌ನ ಎರಡನೆ ಬಂಗಲೆ ನೀಡುವಂತೆ ಬಿಎಸ್‌ವೈ, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ, ಅವರಿಗೆ ಆ ಬಂಗಲೆ ಬದಲಿಗೆ ರೇಸ್‌ಕೋರ್ಸ್ ರಸ್ತೆಯ ನಂ-4 ಬಂಗಲೆಯನ್ನು ರಾಜ್ಯ ಸರಕಾರ ಹಂಚಿಕೆ ಮಾಡಿದೆ.
2004ರಲ್ಲಿ ಬಿಎಸ್‌ವೈ ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ರೇಸ್‌ವ್ಯೆ ಕಾಟೇಜ್‌ನ ಎರಡನೆ ಬಂಗಲೆ ಹಂಚಿಕೆಯಾಗಿತ್ತು. ಇದೀಗ ಅದೇ ಬಂಗಲೆಯಲ್ಲಿದ್ದ ವೇಳೆ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯೂ ಆಗಿದ್ದರು. ಹೀಗಾಗಿ ಅವರು ಅದೇ ಮನೆ ಬೇಕು ಎಂದು ಪಟ್ಟು ಹಿಡಿದ್ದರು.
ರೇಸ್‌ವ್ಯೆ-2 ಬಂಗಲೆ ಸಾ.ರಾ.ಮಹೇಶ್‌ಗೆ: ಸಿಎಂ ಕುಮಾರಸ್ವಾಮಿ ಆಪ್ತರಾಗಿರುವ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರಿಗೆ ರೇಸ್‌ವ್ಯೆ ನಂ.2 ಬಂಗಲೆ ಹಂಚಿಕೆ ಮಾಡಲಾಗಿದೆ. ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಕುಮಾರ ಕೃಪಾ ಪೂರ್ವದ ಒಂದನೆ ನಂಬರ್ ಬಂಗಲೆ ನೀಡಲಾಗಿದೆ.
ಆರ್.ವಿ.ದೇಶಪಾಂಡೆ-ನಂ.1 ರೇಸ್‌ವ್ಯೆ, ಎಂ.ಸಿ.ಮನಗೊಳಿ-ನಂ.1 ಸಪ್ತ ಸಚಿವರ ನಿವಾಸ, ಲಕ್ಷ್ಮಣ್ ಜಾರಕಿಹೊಳಿ- ನಂ.4 ಸಪ್ತ ಸಚಿವರ ನಿವಾಸ, ವೆಂಕಟರಾವ್ ನಾಡಗೌಡ-ನಂ.6 ಸಪ್ತ ಸಚಿವರ ನಿವಾಸ,ಬಂಡೆಪ್ಪ ಕಾಶೆಂಪೂರ್- ನಂ.7 ಸಪ್ತ ಸಚಿವರ ನಿವಾಸ.
ಡಿ.ಕೆ.ಶಿವಕುಮಾರ್-ನಂ.3 ಕ್ರೆಸೆಂಟ್ ರಸ್ತೆ, ಕೆ.ಜೆ.ಜಾರ್ಜ್-ನಂ.2 ಕೆ.ಕೆ.ದಕ್ಷಿಣ, ಯು.ಟಿ.ಖಾದರ್-ನಂ.1 ಜಯಮಹಲ್, ಪುಟ್ಟರಂಗಶೆಟ್ಟಿ-ನಂ.2 ‘ಬಿ’ ಜಯ ಮಹಲ್, ಝಮೀರ್ ಅಹ್ಮದ್ ಖಾನ್-ನಂ.2 ‘ಎ’ ಜಯಮಹಲ್, ಶಿವಾನಂದ ಪಾಟೀಲ್-ನಂ.5 ಜಯಮಹಲ್, ರಾಜಶೇಖರ್ ಪಾಟೀಲ್-ನಂ.3 ‘ಬಿ’ ಜಯ ಮಹಲ್, ಜಿ.ಟಿ.ದೇವೇಗೌಡ-ನಂ.30 ಸ್ಯಾಂಕಿರಸ್ತೆ, ಡಿ.ಸಿ.ತಮ್ಮಣ್ಣ-ನಂ.31 ಸ್ಯಾಂಕಿ ರಸ್ತೆ ನಿವಾಸ ಹಂಚಿಕೆ ಮಾಡಲಾಗಿದೆ.
‘ನನಗೆ ಕೊಡ ಮಾಡಿದ ನಂ.4 ರೇಸ್‌ಕೋರ್ಸ್ ಮನೆಯನ್ನು ತಿರಸ್ಕರಿಸಿದ್ದೇನೆ. ನಾನು ಸಿಎಂಗೆ ಈ ಹಿಂದೆ ಪತ್ರ ಬರೆದು ರೇಸ್‌ಕೋರ್ಸ್‌ನ ನಂ.2 ಮನೆಯನ್ನು ಕೊಡಬೇಕೆಂದು ಕೇಳಿದ್ದೆ. ಆದರೆ, ಸಿಎಂ ನನ್ನ ಕೋರಿಕೆಯನ್ನು ಮನ್ನಿಸದ ಕಾರಣ ಅವರ ನಿರ್ಧಾರವನ್ನು ತಿರಸ್ಕರಿಸಿದ್ದೇನೆ ಮತ್ತು ಡಾಲರ್ಸ್ ಕಾಲನಿಯಲ್ಲಿನ ನನ್ನ ಸ್ವಂತ ಮನೆಯಲ್ಲೆ ಇರಲು ನಿರ್ಧರಿಸಿದ್ದೇನೆ’
-ಬಿ.ಎಸ್.ಯಡಿಯೂರಪ್ಪ ವಿಪಕ್ಷ ನಾಯಕ







