ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಿಂದ ವೈದ್ಯರ ದಿನಾಚರಣೆ

ಮಂಗಳೂರು, ಜು.1: ನಗರದ ಪಳ್ನೀರ್‌ನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯಲ್ಲಿ ವೈದ್ಯರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಎ.ಜೆ. ಇನ್‌ಸ್ಟಿಟ್ಯೂಟ್‌ನ ವೈದ್ಯಕೀಯ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ, ಪ್ರಮುಖ ವೈದ್ಯ ಡಾ. ನಿತೀಶ್ ಭಂಡಾರಿ, ಮಳಿಗೆಯ ಸಹಾಯಕ ಮುಖ್ಯಸ್ಥ ಮುಹಮ್ಮದ್, ಮಾರ್ಕೆಟಿಂಗ್ ಮ್ಯಾನೇಜರ್ ಕಾರ್ತಿಕ್ ಕುಮಾರ್ ಮತ್ತು ಗ್ರಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Next Story





