ಉಡುಪಿ: ಜಿಲ್ಲಾ ವಿಮಾ ಅಧಿಕಾರಿಗೆ ಬೀಳ್ಕೊಡುಗೆ

ಉಡುಪಿ, ಜು.1: ಉಡುಪಿ ಜಿಲ್ಲಾ ಕರ್ನಾಟಕ ಸರಕಾರಿ ವಿಮಾ ಇಲಾಖೆ ಯ ಜಿಲ್ಲಾ ವಿಮಾ ಆಧಿಕಾರಿ ರಮೇಶ್ ಎಸ್. ಕಾಮತ್ ಶನಿವಾರ ಸೇವಾ ನಿವೃತ್ತಿ ಹೊಂದಿದ್ದು, ಅವರನ್ನು ಜಿಲ್ಲಾ ವಿಮಾ ಇಲಾಖೆಯ ಸಿಬ್ಬಂದಿಗಳು ಆತ್ಮೀಯವಾಗಿ ಬೀಳ್ಕೊಟ್ಟರು.
ಇಲಾಖೆಯಲ್ಲಿ 34 ವರ್ಷಗಳ ಸೇವೆ ಸಲ್ಲಿಸಿದ್ದ ವಿಮಾ ಅಧಿಕಾರಿ ರಮೇಶ್ ಎಸ್ ಕಾಮತ್ ತಮ್ಮ ಸೇವೆಗಾಗಿ ಜಿಲ್ಲಾ ಸರ್ವೋತ್ತಮ ಪ್ರಶಸ್ತಿ ಪಡೆದಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಮಂಗಳೂರು ಜಿಲ್ಲಾ ವಿಮಾ ಅಧಿಕಾರಿ ಉಮಾ ಗೌರಿ ಹಾಗೂ ಶಾಲಿನಿ ರಮೇಶ್ ಕಾಮತ್ ಉಪಸ್ಥಿತರಿದ್ದರು.
Next Story





