ಅಜ್ಜನ ಸ್ಮರಣೆಗೆ ಶಾಲಾ ಮಕ್ಕಳಿಗೆ ಮೊಮ್ಮಗಳಿಂದ ಡ್ರಾಯಿಂಗ್ ಬುಕ್ ಕೊಡುಗೆ

ಬಂಟ್ವಾಳ, ಜು.1: ತಾಲೂಕಿನ ಪರ್ಲಿಯಾ ನಿವಾಸಿ ರಿಯಾಝ್ ಜವಾನ್ ಹಾಗೂ ನೌಶೀನಾ ದಂಪತಿಯ ಪುತ್ರಿ 4 ವರ್ಷ ಪ್ರಾಯದ ಅನ್ಹಾ ಮರಿಯಮ್ ರಶೀದಾ ಅಗಲಿದ ತನ್ನ ತಾತನ 13ನೇ ವರ್ಷದ ಸ್ಮರಣೆಯನ್ನು ಕೊಡಂಗೆ ಸರಕಾರಿ ಶಾಲೆಯ 1ನೇ ತರಗತಿ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಬುಕ್ ಕೊಡುಗೆಯಾಗಿ ನೀಡುವ ಮೂಲಕ ಆಚರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಸಂದರ್ಭ ಮಾತನಾಡಿದ ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಬಿ.ಎಂ.ಇಸ್ಮಾಯೀಲ್ ವಿದ್ಯಾರ್ಥಿಗಳು ಈ ರೀತಿಯ ವಿಶಿಷ್ಟ ರೀತಿಯ ಕೊಡುಗೆಯನ್ನು ನೀಡಿದರೆ ಮತ್ತಷ್ಟು ಕ್ರಿಯಾಶೀಲರಾಗುತ್ತಾರೆ ಎಂದರು.
ಎಸ್‌ಡಿಎಂಸಿ ಸದಸ್ಯರಾದ ಮುಹಮ್ಮದ್ ಹನೀಫ್ ಪರ್ಲಿಯಾ, ಮುಹಮ್ಮದ್ ಹನೀಫ್ ಕೊಡಂಗೆ, ಕೆ.ಹೈದರ್ ಪರ್ಲಿಯಾ, ಶಾಲಾ ಮುಖ್ಯ ಶಿಕ್ಷಕಿ ಸೋನಿತಾ ಕೆ., ರಿಯಾಝ್ ಜವಾನ್, ಪಿ.ಅಬ್ದುಲ್ ಬಶೀರ್ ಪರ್ಲಿಯಾ, ಜವಾನ್ ಫ್ರೆಂಡ್ಸ್‌ನ ಸತ್ತಾರ್ ನಂದರಬೆಟ್ಟು, ಆಶಿಕ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.
Next Story





