ಪೆನಾಲ್ಟಿ ಶೂಟೌಟ್: ಪ್ರಿ ಕ್ವಾರ್ಟರ್‌ನಲ್ಲಿ ಸ್ಪೇನ್‌ನ್ನು ಹೊರದಬ್ಬಿದ ರಶ್ಯ

ಮಾಸ್ಕೋ, ಜು.1: ಪೆನಾಲ್ಟಿ ಶೂಟೌಟ್‌ನಲ್ಲಿ ಮಾಜಿ ಚಾಂಪಿಯನ್ ಸ್ಪೇನ್‌ನ್ನು 4-3 ಅಂತರದಲ್ಲಿ ಮಣಿಸಿದ ಆತಿಥೇಯ ರಶ್ಯ ಫಿಫಾ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ
ಲುಝ್ನಿಕಿ ಸ್ಟೇಡಿಯಂನಲ್ಲಿ ರವಿವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 90 ನಿಮಿಷಗಳ ಆಟದ ಕೊನೆಗೊಂಡಾಗ ಉಭಯ ತಂಡಗಳು 1-1 ಸಮಬಲ ಸಾಧಿಸಿತ್ತು. ಬಳಿಕ ಹೆಚ್ಚುವರಿ ಸಮಯ ನೀಡಿದರೂ ಫಲಕಾರಿಯಾಗಿಲ್ಲ
ಫಲಿತಾಂಶ ನಿರ್ಧರಿಸಲು ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ರಶ್ಯ ಜಯ ಗಳಿಸಿತು.
ಆಟದ 12ನೇ ನಿಮಿಷದಲ್ಲಿ ರಶ್ಯದ ಸೆರ್ಗುಯ್ ಇಗ್ನೆಶ್‌ವಿಚ್ ಅವರು ದಾಖಲಿಸಿದ ಸೆಲ್ಫ್ ಗೋಲು ಸ್ಪೇನ್ 1-0 ಮುನ್ನಡೆ ಸಾಧಿಸಲು ನೆರವಾಗಿತ್ತು. 41ನೇ ನಿಮಿಷದಲ್ಲಿ ರಶ್ಯದ ಡಿರೆಬಾ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದರು. ಬಳಿಕ ಉಭಯ ತಂಡಗಳಿಂದಲೂ ಗೋಲು ಬರಲಿಲ್ಲ. ಈ ಕಾರಣದಿಂದಾಗಿ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು.
Next Story





