ಬಿ.ಸಿ.ರೋಡ್ ಟಿಸಿ ಪಾಯಿಂಟ್ ನೆಲಸಮ

ಬಂಟ್ವಾಳ, ಜು. 1: ಬಿ.ಸಿ.ರೋಡ್ ಸರ್ವಿಸ್ ಬಸ್ ನಿಲ್ದಾಣದಲ್ಲಿ ಇದ್ದಂತಹ ಕೆಎಸ್ಸಾರ್ಟಿಸಿ ಸಂಸ್ಥೆಯ ಟಿಸಿಪಾಯಿಂಟನ್ನು ಜೂ. 30ರಂದು ರಾತ್ರಿ ಜೆಸಿಬಿ ಬಳಸಿ ಕೆಡವಿ ಹಾಕಲಾಗಿದೆ. ಆದರೆ, ಇದನ್ನು ಯಾರ ಸೂಚನೆಯಂತೆ ಕೆಡವಿ ಹಾಕಿದ್ದಾರೆಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.
2012ರಲ್ಲಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಟಿಸಿ ಪಾಯಿಂಟನ್ನು ಪುರಸಭೆಯ ವತಿಯಿಂದ ನಿರ್ಮಿಸಿದ್ದು, ಇದನ್ನು ಬಾಡಿಗೆಗೆ ಒದಗಿಸಲಾಗಿತ್ತು. ಆದರೆ, ಪುರಸಭಾ ಅಧ್ಯಕ್ಷರಿಗೂ ಯಾವುದೇ ಮಾಹಿತಿ ನೀಡದೇ ಶನಿವಾರ ರಾತ್ರಿ ಜೆಸಿಬಿ ಬಳಸಿ ಕೆಡವಿದ್ದು, ಇದೀಗ ನೆಲ ಸಮವಾಗಿದೆ. ಯಾವ ಕಾರಣಕ್ಕಾಗಿ ಇದನ್ನು ನೆಲಸಮ ಮಾಡಲಾಗಿದೆ ಎಂಬವುದು ನಿಗೂಢವಾಗಿದೆ.
ಘಟನೆ ನಡೆದ ಮಾಹಿತಿ ಬಂದ ತಕ್ಷಣ ಪುರಸಭಾ ಇಂಜಿನಿಯರ್‌ಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದರು ಎಂದು ತಿಳಿದುಬಂದಿದೆ.
Next Story





