ಮಡಿಕೇರಿ: ತೋಡಿನಲ್ಲಿ ಪತ್ತೆಯಾದ ದೇವಾಲಯದ ನಾಣ್ಯ, ವಸ್ತುಗಳು

ಮಡಿಕೇರಿ, ಜು.1: ದೇವಾಲಯಕ್ಕೆ ಸಂಬಂಧಿಸಿದ ಪೂಜಾ ಸಾಮಾಗ್ರಿಗಳು ಹಾಗೂ ನಾಣ್ಯಗಳು ನಗರದ ಕೊಹಿನೂರು ರಸ್ತೆಯ ತೋಡಿನಲ್ಲಿ ದೊರೆತ ಘಟನೆ ನಡೆದಿದೆ.
ಚಲಾವಣೆಯಲ್ಲಿಲ್ಲದ ಮತ್ತು ಚಲಾವಣೆಯಲ್ಲಿರುವ ನಾಣ್ಯಗಳು, ದೇವಾಲಯದ ಹುಂಡಿಯ ಹರಕೆಯ ಬೆಳ್ಳಿಯ ನಾಗನ ಪ್ರತಿಮೆಗಳು, ದೀಪಗಳು, ಮಾನವ ರೂಪದ ಬೆಳ್ಳಿಯ ಹಾಳೆಗಳು ಹಾಗೂ ಅಂದಾಜು ನಾಲ್ಕು ಕೆ.ಜಿ. ತೂಕದ ನಾಣ್ಯಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ದೇವಾಲಯದಿಂದ ಕಳ್ಳತನ ಮಾಡಿದ ವಸ್ತುಗಳನ್ನು ಯಾರೋ ಚೋರರು ಪಾಪ ಪ್ರಜ್ಞೆಯಿಂದ ತೋಡಿನಲ್ಲಿ ಎಸೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. 5, 10, 20 ಪೈಸೆಯ ಹಳೆಯ ನಾಣ್ಯಗಳು, 1, 2, 5 ಮತ್ತು 10 ರೂ. ಮೌಲ್ಯದ ಹೊಸ ನಾಣ್ಯಗಳು ಕೂಡ ದೊರೆತಿದೆ.
Next Story





