ಶೀಘ್ರದಲ್ಲಿ ಗುಜ್ಜರರಿಗೆ ಶೇ. 1 ಮೀಸಲಾತಿ
ಜೈಪುರು, ಜು. 1: ಗುಜ್ಚರ ಸಮುದಾಯಕ್ಕೆ ಶೇ. 1 ಮೀಸಲಾತಿ ಕಡ್ಡಾಯ ಗೊಳಿಸುವ ಸುತ್ತೋಲೆಯನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ರಾಜೇಂದ್ರ ರಾಥೋರ್ ರವಿವಾರ ತಿಳಿಸಿದ್ದಾರೆ.
ಗುಜ್ಜರ ಆಕರ್ಷಣ್ ಸಂಘರ್ಷ ಸಮಿತಿಯ ನಿಯೋಗದ ಜೊತೆಗಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜ್ಜರ ಆಂದೋಲನದ ಸಂದರ್ಭ ಸಮುದಾಯದ ವಿರುದ್ಧ ದಾಖಲಿಸಲಾದ 203 ಕ್ರಿಮಿನಲ್ ಪ್ರಕರಣಗಳನ್ನು ಸರಕಾರ ಹಿಂದೆ ತೆಗೆಯಲಿದೆ ಎಂದು ಅವರು ಹೇಳಿದರು.
ದೇವನಾರಾಯಣ ಯೋಜನೆ, ಗುರುಕುಲ ಆವಾಸ್ ಯೋಜನೆಗೆ ಸಂಬಂಧಿಸಿ ವಿಷಯಗಳ ಬಗ್ಗೆ ಹಾಗೂ ಗುಜ್ಜರ ಆಂದೋಲನದ ಸಂದರ್ಭ ದಾಖಲಿಸಲಾದ ಪ್ರಕರಣಗಳನ್ನು ಹಿಂದೆಗೆಯುವ ಬಗ್ಗೆ ಸಭೆಯಲ್ಲಿ ನಡೆದ ಚರ್ಚೆ ಬಗ್ಗೆ ಸದಸ್ಯರು ತೃಪ್ತರಾಗಿದ್ದಾರೆ ಎಂದು ಅವರು ತಿಳಿಸಿದರು.
Next Story





