Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ2 July 2018 12:11 AM IST
share
ಓ ಮೆಣಸೇ...

ನಮ್ಮ ನೀಯತ್ತು ಶುದ್ಧವಿದೆ- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಅಧಿಕಾರವಿಲ್ಲದೇ ಇರುವಾಗ ಅದು ಶುದ್ಧವೇ ಇರುತ್ತದೆ ಬಿಡಿ.

---------------------

ಹಿಂಸೆ ಮತ್ತು ಕ್ರೌರ್ಯದಿಂದ ಏನೂ ದಕ್ಕದು -ನರೇಂದ್ರ ಮೋದಿ, ಪ್ರಧಾನಿ
ಒಬ್ಬರಿಗೆ ಪ್ರಧಾನಿ ಪದವಿ ದಕ್ಕಿದ ಕುರಿತು ವದಂತಿಯಿದೆ.

---------------------

ಪುಸ್ತಕ ನೋಡಿ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ತರುವ ಯೋಚನೆ ಇದೆ -ಎಸ್.ಮಹೇಶ್, 
ಸಚಿವ ಮೊದಲು ಶಿಕ್ಷಕರಿಗೆ ಪುಸ್ತಕ ನೋಡದೆ ಪಾಠ ಮಾಡುವುದನ್ನು ಕಲಿಸಬೇಕಾಗಿದೆ.

---------------------

ಪ್ರಧಾನಿ ಮೋದಿಯ ಭಯದಿಂದ ಪ್ರತಿಪಕ್ಷಗಳೆಲ್ಲ ಒಂದಾಗಿವೆ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಪ್ರಧಾನಿಯವರು ಭಯ ಉತ್ಪಾದಕರೇ?

---------------------

ನನಗೆ ಕಲ್ಲಿನ ಹಾರಬೇಕಾದರೂ ತೊಡಿಸಿ, ಹೂವಿನ ಹಾರ ಹಾಕಬೇಡಿ -ಡಿ.ಕೆ. ಶಿವಕುಮಾರ್, 
ಸಚಿವ ಬಿಜೆಪಿಯವರು ಗಲ್ಲಿನ ಹಾರ ತೊಡಿಸಲು ಹೊಂಚು ಹಾಕಿದ್ದಾರೆ.

---------------------

ಮಾಜಿ ಸಿಎಂ ಸಿದ್ದರಾಮಯ್ಯರಿಗೆ ನನ್ನ ಮೇಲೆ ಯಾವುದೇ ಅಸಮಾಧಾನವಿಲ್ಲ -ಡಾ.ಜಿ. ಪರಮೇಶ್ವರ್, 

ಉಪಮುಖ್ಯಮಂತ್ರಿ ಅವರು ಹಾಲಿ ಸಿಎಂ ಆಗಿದ್ದಾಗ ಅಸಮಾಧಾನವಿತ್ತೇ?

---------------------

ಭಾರತೀಯರಲ್ಲಿ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಕ್ತಗತವಾಗಿದೆ -ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ಅದಕ್ಕೇ ರಸ್ತೆಯಲ್ಲಿ ರಕ್ತ ಹರಿಯುತ್ತಿರುವುದು.

---------------------

ಮುಖ್ಯಮಂತ್ರಿ ಸ್ಥಾನದಿಂದ ನನ್ನನ್ನು ಕೆಳಗಿಳಿಸುವುದು ಸುಲಭದ ಮಾತಲ್ಲ - ಕುಮಾರಸ್ವಾಮಿ, ಮುಖ್ಯಮಂತ್ರಿ

ದೇವೇಗೌಡರಿಗೆ ಹೀಗೊಂದು ಸವಾಲೇ?

---------------------

ವಲಸಿಗರನ್ನು ಅವರು ಎಲ್ಲಿಂದ ಬಂದರೋ ಅಲ್ಲಿಗೇ ತಕ್ಷಣ ಹೊರಗಟ್ಟಬೇಕು -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಅಮೆರಿಕನ್ನರೆಲ್ಲರೂ ಇಂಗ್ಲೆಂಡ್‌ನಿಂದ ವಲಸೆ ಬಂದವರಲ್ಲವೇ?

---------------------

ಕನಸಿನ ಬೇಟೆಯನ್ನು ಯಾವತ್ತೂ ನಿಲ್ಲಿಸಬೇಡಿ -ಸಚಿನ್ ತೆಂಡುಲ್ಕರ್, ಮಾಜಿ ಕ್ರಿಕೆಟಿಗ

ಅದಕ್ಕೇ ಜನರಿನ್ನೂ ಸ್ವಿಸ್ ಬ್ಯಾಂಕಿನ ಕಪ್ಪು ಹಣದ ನಿರೀಕ್ಷೆಯಲ್ಲಿರುವುದು.

---------------------

ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರೇ ಕಚ್ಚಾಡಿ ಸಾಯ್ತಿದ್ದಾರೆ -ಆರ್. ಅಶೋಕ್, ಮಾಜಿ ಡಿಸಿಎಂ

ನೀವು ಹೆಣ ಹೊರುವುದಕ್ಕೆ ಕಾದದ್ದೇ ಬಂತು.

---------------------

ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಒಂದು ರೀತಿಯಲ್ಲಿ ಪ್ರಜಾಪ್ರಭುತ್ವದ ನರಮೇಧವಾಗಿತ್ತು -ಎಂ.ಜೆ. ಅಕ್ಬರ್, ಕೇಂದ್ರ ಸಚಿವ

ತುರ್ತು ಪರಿಸ್ಥಿತಿಯಿಲ್ಲದೆಯೇ ಮೋದಿ ಅದನ್ನು ಸಾಧಿಸಿದ್ದಾರೆ.

---------------------

ನಾನು ಏನೋ ಆಗಬೇಕಿತ್ತು, ಆದರೆ ಏನೋ ಆಗಿದ್ದೇನೆ -ಬಸವರಾಜ ಹೊರಟ್ಟಿ, ಹಂಗಾಮಿ ಸಭಾಪತಿ

ಹೀಗೆಲ್ಲ ಹೇಳಿಕೆ ನೀಡಿ ಇನ್ನೇನೋ ಆಗಬೇಡಿ.

---------------------

ಪ್ರಾಚೀನ ಪ್ರೇಮವು ಎಲ್ಲಾ ಸಂಬಂಧಗಳನ್ನೂ ಮೀರಿರುವಂಥದ್ದು -ರವಿ ಶಂಕರ ಗುರೂಜಿ, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ
ಅಕ್ರಮ ಸಂಬಂಧಗಳಿಗೂ ಆರ್ಟ್ ಆಫ್ ಲಿವಿಂಗ್‌ಗೂ ಹತ್ತಿರದ ಸಂಬಂಧ.

---------------------

ಪ್ರಧಾನಿ ನರೇಂದ್ರ ಮೋದಿ ಔರಂಗಜೇಬ್‌ಗಿಂತಲೂ ಕ್ರೂರಿ -ರಣದೀಪ್ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ
ಔರಂಗಜೇಬ್ ಕಾಲದಲ್ಲಿ ಅಂಬೇಡ್ಕರ್ ಸಂವಿಧಾನವಿರಲಿಲ್ಲ.

---------------------

 ವಂಶಾಡಳಿತ ಮತ್ತು ಪ್ರಜಾಪ್ರಭುತ್ವ ಒಟ್ಟಿಗೆ ಕಾರ್ಯ ನಿರ್ವಹಿಸದು -ಅನಂತ ಕುಮಾರ್, ಕೇಂದ್ರ ಸಚಿವ

ಮನುಶಾಸ್ತ್ರ ಮತ್ತು ಸಂವಿಧಾನ ಕೂಡ ಒಟ್ಟಿಗೆ ಕಾರ್ಯನಿರ್ವಹಿಸದು.

---------------------

ಭಾರತ - ಚೀನಾದೊಂದಿಗೆ ಕಳ್ಳಾಟ ಆಡುವುದಿಲ್ಲ -ಕೆ.ಪಿ.ಶರ್ಮಾ ಒಲಿ, ನೇಪಾಲ ಪ್ರಧಾನಿ

ಮತ್ತೆ ಯಾವ ಆಟ ಆಡಲು ಹೊರಟಿದ್ದೀರಿ?

---------------------

ರಾಜಕೀಯದವರು ಹಾಗೂ ಮಾಧ್ಯಮದವರೆಲ್ಲ ಸೇರಿ ನನ್ನನ್ನು ದೊಡ್ಡ ಕಳ್ಳನಂತೆ ಬಿಂಬಿಸುತ್ತಿದ್ದಾರೆ -ವಿಜಯ ಮಲ್ಯ, ಉದ್ಯಮಿ

ಕಳ್ಳರೆಲ್ಲ ಅದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

---------------------

ಸಚಿವನಾಗಿ ಮೊದಲು ಸರಕಾರದ ಪರ, ನಂತರ ಪಕ್ಷದ ಪರ ಬ್ಯಾಟಿಂಗ್ ಮಾಡುತ್ತೇನೆ - ಪ್ರಿಯಾಂಕ್ ಖರ್ಗೆ, ಸಚಿವ

ಮಲ್ಲಿಕಾರ್ಜುನ ಖರ್ಗೆಗೆ ಬೌಲಿಂಗ್ ಮಾಡುವ ಕೆಲಸವೇ?

---------------------

ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಸರಕಾರವನ್ನು ದೇವರೇ ರಚಿಸಿದ್ದಾನೆ. ದೇವರೇ ರಕ್ಷಿಸುತ್ತಾನೆ -ವೆಂಕಟ ರಾವ್ ನಾಡಗೌಡ, ಸಚಿವ

ದೇವೇಗೌಡರಿಗೆ ಈ ರೀತಿಯ ಹೊಗಳಿಕೆಯೇ?

---------------------

ಕೋಮುವಾದಿ ಬಿಜೆಪಿ ದೂರವಿಡಲು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮುಂದುವರಿಕೆ ಅನಿವಾರ್ಯ -ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ

ಅಥವಾ ಪಕ್ಷದಲ್ಲಿ ಸಿದ್ದರಾಮಯ್ಯರನ್ನು ದೂರವಿಡಲು?

---------------------

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹುಲಿ ಗೆಲ್ಲಬೇಕೋ? ಕತ್ತೆ ಕಿರುಬ ಗೆಲ್ಲಬೇಕೋ? -ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

ಹುಲಿ ಪಂಜರದೊಳಗಿರಲಿ. ಕತ್ತೆ ಕಿರುಬ ಕಾಡಿಗೆ ಹೋಗಲಿ. ಸಜ್ಜನ ಮನುಷ್ಯರು ಗೆದ್ದರೆ ಸಾಕು.

---------------------

ರಾಜ್ಯ ರಾಜಕೀಯ ಇತಿಹಾಸದಲ್ಲಿ ಯಾವ ಮೈತ್ರಿ ಸರಕಾರವೂ ಅಧಿಕಾರಾವಧಿ ಪೂರ್ಣಗೊಳಿಸಿಲ್ಲ -ಶ್ರೀರಾಮುಲು, ಶಾಸಕ

ಪೂರ್ಣಗೊಳಿಸಲು ನೀವು ಬಿಟ್ಟಿಲ್ಲ.

---------------------

ನಾವು ನಮ್ಮ ಪೂರ್ವಿಕರ ಜೀವನ ಶೈಲಿ ಮತ್ತೆ ರೂಢಿಸಿಕೊಳ್ಳಬೇಕು - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ವಯಸ್ಸಾದಂತೆ ಕಾಡು ಕರೆಯುತ್ತಿರಬೇಕು.

share
ಪಿ.ಎ.ರೈ
ಪಿ.ಎ.ರೈ
Next Story
X