ಗೂನಡ್ಕ: ಉಚಿತ ಮದ್ರಸ ಪಠ್ಯಪುಸ್ತಕಗಳ ವಿತರಣೆ

ಸುಳ್ಯ, ಜು.2: ಗೂನಡ್ಕ ಜಮಾಅತ್‌ನ ಎನ್.ಆರ್.ಐ. ಫೋರಂ ಯುಎಇ ಘಟಕದ ಸಲಹಾ ಸಮಿತಿಯ ಸದಸ್ಯ ಟಿ.ಬಿ.ಉಮರ್ ಮುಸ್ಲಿಯಾರ್ ಕೊಡುಗೆಯಾಗಿ ನೀಡಿದ ಮದ್ರಸ ಪಠ್ಯಪುಸ್ತಕಗಳನ್ನು ಗೂನಡ್ಕ ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಿಗೆ ಶನಿವಾರ ವಿತರಿಸಲಾಯಿತು.
ಮದ್ರಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವು ಬದ್ರಿಯಾ ಜುಮಾ ಮಸೀದಿಯ ಖತೀಬ್ ಮುಹಮ್ಮದಲಿ ಸಖಾಫಿಯ ದುಆದೊಂದಿಗೆ ಆರಂಭಗೊಂಡಿತು. ಹಿಮಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ಲ ಕೊಪ್ಪದಕಜೆ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ರೀಜನಲ್ ಎಸ್.ಎಂ.ಎ. ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಟಿ.ಬಿ.ಉಮರ್ ಮುಸ್ಲಿಯಾರ್‌ರ ಸಹೋದರ ಟಿ.ಬಿ.ಅಬ್ದುಲ್ಲಾ ಹಾಗೂ ಪುತ್ರ ಉಪೈಫ್ ಪುಸ್ತಕ ವಿತರಣೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಮಾಜಿ ಅಧ್ಯಕ್ಷ ಹಾಜಿ ಪಿ.ಎ.ಉಮರ್, ಮುಅಲ್ಲಿಮ್‌ಗಳಾದ ಸಂಶುದ್ದೀನ್ ಮುಸ್ಲಿಯಾರ್ ಪೆರಾಜೆ, ಹಬೀಬ್ ಹಿಮಮಿ, ಗ್ರಾಪಂ ಸದಸ್ಯರಾದ ಪಿ.ಕೆ.ಅಬೂ ಸ್ವಾಲಿಹ್ ಮತ್ತಿತರರು ಉಪಸ್ಥಿತರಿದ್ದರು.
ಮುಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿ, ವಂದಿಸಿದರು.







