ಚೆಂಗಳ: ಸೂಪರ್ ಮಾರ್ಕೆಟ್‌ನಲ್ಲಿ ಬೆಂಕಿ ಅನಾಹುತ; ಲಕ್ಷಾಂತರ ರೂ. ನಷ್ಟ

ಕಾಸರಗೋಡು, ಜು.2: ಸೂಪರ್ ಮಾರ್ಕೆಟ್‌ವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ನಗರ ಹೊರವಲಯದ ಚೆಂಗಳದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.
ಚೆಂಗಳದಲ್ಲಿರುವ ಜಲೀಲ್ ಎಂಬವರಿಗೆ ಸೇರಿದ ಸೂಪರ್ ಮಾರ್ಕೆಟ್ ಇದಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ, ನಾಗರಿಕರು ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.
ಮಳಿಗೆಯ ಜನರೇಟರ್‌ನ ಬಿಸಿಗೆ ಪಕ್ಕದಲ್ಲಿದ್ದ ಪ್ಲಾಸ್ಟಿಕ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಈ ಅನಾಹುತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
Next Story