ಎನ್‌ಎಂಪಿಟಿ ಅಧ್ಯಕ್ಷರಾಗಿ ಎಂ.ಟಿ. ಕೃಷ್ಣ ಬಾಬು
ಮಂಗಳೂರು, ಜು.2: ಎನ್‌ಎಂಪಿಟಿಯ ನೂತನ ಅಧ್ಯಕ್ಷ (ಚೇರ್‌ಮೆನ್) ಆಗಿ ಐಎಎಸ್ ಅಧಿಕಾರಿ ಎಂ.ಟಿ. ಕೃಷ್ಣ ಬಾಬು ನೇಮಕಗೊಂಡಿದ್ದಾರೆ.
ಪ್ರಸ್ತುತ ಇವರು ವಿಶಾಖಪಟ್ಟಣ ಬಂದರಿನ ಅಧ್ಯಕ್ಷರಾಗಿದ್ದು, ಸರಕು ನಿರ್ವಹಣೆ ಜತೆಗೆ ಹಸಿರು ಬಂದರು ನಿರ್ಮಾಣದಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದ್ದಾರೆ. 1993ರ ಐಎಎಸ್ ಬ್ಯಾಚ್‌ನ ಕೃಷ್ಣ ಬಾಬು ನುರಿತ ಇಂಜಿನಿಯರ್ ಆಗಿದ್ದು, ಎನ್‌ಟಿಪಿಸಿಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು.
ಇವರು ಪಾರಾದೀಪ್ ಬಂದರು ಮಂಡಳಿ, ಕೊಲ್ಕತ್ತಾ ಬಂದರು ಮಂಡಳಿ ಮತ್ತು ಹಲ್ದಿಯಾ ಡಾಕ್ ಕಾಂಪ್ಲೆಕ್ಸ್‌ನ ಅಧ್ಯಕ್ಷರಾಗಿಯೂ ಹೆಚ್ಚುವರಿ ಅಧಿಕಾರದಲ್ಲಿದ್ದಾರೆ.
Next Story





