ತಾಜುಲ್ ಉಲಮಾ ನ್ಯೂ ಬೀ ಇಸ್ಲಾಮಿಕ್ ಪ್ರೇ ಸ್ಕೂಲ್ ಉದ್ಘಾಟನೆ

ಮಂಗಳೂರು, ಜು.2: ಸಮೀಪದ ಉಳ್ಳಾಲದಲ್ಲಿ ತಾಜುಲ್ ಉಲಮಾ ನ್ಯೂ ಬೀ ಇಸ್ಲಾಮಿಕ್ ಪ್ರೇ ಸ್ಕೂಲ್‌ನ್ನು ಸಿಹಾಬುದ್ದೀನ್ ಸಖಾಫಿ ತಲಕ್ಕಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಸ್ಲಾಮಿನ ಆದರ್ಶ ಮಕ್ಕಳಲ್ಲಿ ಬೆಳೆಯಬೇಕು. ಮಕ್ಕಳ ಕಾರ್ಯ ಇಸ್ಲಾಂ ಚೌಕಟ್ಟು ಮೀರದೇ ನಡೆಯಬೇಕು ಎಂಬ ಉದ್ದೇಶದಿಂದ ತಾಜುಲ್ ಉಲಮಾ ನ್ಯೂ ಬೀ ಇಸ್ಲಾಮಿಕ್ ಪ್ರೇ ಸ್ಕೂಲ್‌ನ್ನು ತೆರೆಯಲಾಗಿದೆ. ಶಿಕ್ಷಣ ಮಕ್ಕಳ ಅಭಿವೃದ್ಧಿಗಿರುವ ಸಾಧನವಾಗಿದೆ ಎಂದರು.
ಏಷ್ಯನ್ ಬಾವಾ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಸ್ಹಾಕ್ ಝುಹ್‌ರಿ, ಯಾಕೂಬ್ ಸಅದಿ, ಮನ್ಸೂರ್ ಹಿಮಮಿ, ಹೈದರ್ ಅಲಿ, ನಝೀರ್ ಅಹ್ಸನಿ, ಇಸ್ಮಾಯೀಲ್ ಝಕರಿಯಾ, ಅಶ್ರಫ್ ಸಅದಿ, ಹಮೀದ್ ಹಾಜಿ ದೇರಳಕಟ್ಟೆ ಉಪಸ್ಥಿತರಿದ್ದರು.
Next Story





