‘ಅವರು ಸ್ವರ್ಗಕ್ಕೆ ತಲುಪಲಿ, ಮಧ್ಯೆ ಮಾತನಾಡಬೇಡಿ': ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು, ಜು. 2: ‘ಅವರು ಸ್ವರ್ಗಕ್ಕೆ ತಲುಪಲಿ, ಮಧ್ಯದಲ್ಲಿ ಮಾತನಾಡಬೇಡಿ. ಒಂದು ವೇಳೆ ನೀವು ಮಾತನಾಡಬೇಕಿದ್ದರೆ ಆಮೇಲೆ ಮಾತನಾಡಿ’ ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್, ಸದನದ ಸದಸ್ಯರಿಗೆ ಸಲಹೆ ನೀಡಿದ ಪ್ರಸಂಗ ನಡೆಯಿತು.
ಸೋಮವಾರ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ವೇಳೆ ಕಾಂಗ್ರೆಸ್ ಪಕ್ಷದ ಸದಸ್ಯರಾದ ಶಿವರಾಂ ಹೆಬ್ಬಾರ್ ಹಾಗೂ ರಹೀಂ ಖಾನ್ ಪರಸ್ಪರ ಮಾತನಾಡುತ್ತಿದ್ದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ರಮೇಶ್‌ಕುಮಾರ್, ‘ಹೆಬ್ಬಾರ್, ಅವರು ಸ್ವರ್ಗಕ್ಕೆ ತಲುಪಲಿ ಮಾತನಾಡಬೇಡಿ’ ಎಂದು ಸೂಚಿಸಿದರು.
ಸಂತಾಪ ಸೂಚನೆ ಕಲಾಪ ಆರಂಭದಲ್ಲೇ ಅಲ್ಲಲ್ಲೆ ನಿಂತು ಮಾತನಾಡುತ್ತಿದ್ದ ಆಡಳಿತ ಮತ್ತು ವಿಪಕ್ಷ ಸದಸ್ಯರಿಗೆ ನಿಮ್ಮ-ನಿಮ್ಮ ಆಸನದಲ್ಲಿ ಆಸೀನರಾಗಿ ಎಂದು ರಮೇಶ್ ಕುಮಾರ್ ಅವರು ನಿರ್ದೇಶಿಸಿದ್ದರು. ಆದರೂ ಮಧ್ಯದಲ್ಲಿ ಮಾತನಾಡುತ್ತಿದ್ದ ಸದಸ್ಯರಿಗೆ ಅವರು ಸ್ವರ್ಗಕ್ಕೆ ತಲುಪಲಿ, ಮಾತನಾಡಬೇಡಿ ಎಂದು ಮಾರ್ಮಿಕವಾಗಿ ತಿಳಿಸಿದರು.
Next Story





